ಸಪ್ತಸಾಗರ ತೀರ್ಥದ ಪದಶಃ ಅರ್ಥ ಏಳು ಸಾಗರಗಳ ನೀರು ಎಂದಾಗುತ್ತದೆ ಹಾಗೂ ಇಲ್ಲಿನ ಪ್ರತೀತಿಯ ಪ್ರಕಾರ, ಇಲ್ಲಿನ ಕೊಳದಲ್ಲಿ ತುಂಬುವ ನೀರು ಏಳು ಮಹಾ ಸಾಗರಗಳಿಂದ ಕೂಡಿದ ನೀರಾಗಿದೆ. ಇದು ಉಥ್ವಗನಾಥ ಸ್ವಾಮಿ ದೇವಾಲಯಕ್ಕೆ ಸಮೀಪದಲ್ಲಿದೆ ಹಾಗೂ ತಿರುಮನಂಚೇರಿ ತಲುಪಿದ ಬಳಿಕ ಇಲ್ಲಿಗೆ ತಲುಪುವುದು ಬಹಳ ಸುಲಭವಾಗಿದೆ. ಮಕ್ಕಳಾಗದ ಪತಿ-ಪತ್ನಿಯರಿಗೆ ಇಲ್ಲಿರುವ ಕೊಳ ಬಹಳ ಮಹತ್ವದ್ದು. ಇಲ್ಲಿನ ದೇವಾಲಯಕ್ಕೆ ಭೇಟಿ ನೀಡಿ ನಂತರ ಸಪ್ತಸಾಗರ ತೀರ್ಥದಲ್ಲಿ ಮುಳುಗಿ ಎದ್ದರೆ ಮಕ್ಕಳಾಗುವುದು ಎಂಬ ಪ್ರತೀತಿ ಇಲ್ಲಿನ ಜನರಲ್ಲಿದೆ. ಇದೊಂದು ಸುಂದರ ಹಾಗಿ ಆಕರ್ಷಕ ಕೊಳವಾಗಿದ್ದು, ಧಾರ್ಮಿಕ ಕಾರಣಗಳ ಹೊರತಾಗಿ ಸಪ್ತಸಾಗರ ತೀರ್ಥದಲ್ಲಿ ಮುಳುಗುವ ಕಾರಣಕ್ಕಾದರೂ ಭೇಟಿ ನೀಡಲೇ ಬೇಕು. ಸಾಮಾನ್ಯವಾಗಿ ಇಲ್ಲಿ ಮುಳುಗೆದ್ದ ಬಳಿಕ ಭಕ್ತರು ರಾಹು ದೇವರಿಗೆ ಪೂಜೆ ಸಲ್ಲಿಸುತ್ತಾರೆ.


Click it and Unblock the Notifications