ತೀರ್ಥ ತೊಟ್ಟಿಯು ತೇಣಿಯಿಂದ 19 ಕಿಮೀ ಮತ್ತು ಪೆರಿಯಾಕುಳಂನಿಂದ 2 ಕಿಮೀ ದೂರದಲ್ಲಿದೆ. ಇದು ಮದುರೈ-ಕೊಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೇಣಿಯಿಂದ ಬೋಡಿನಾಯಕ್ಕನೂರಿಗೆ ಹೋಗುವ ದಾರಿಯಲ್ಲಿದೆ. ಇದೊಂದು ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿ ಸುಬ್ರಮಣಿಯರ್ ದೇವಸ್ಥಾನವಿದೆ. ಇದು 1000 ವರ್ಷಗಳಷ್ಟು ಪುರಾತನವಾದ ದೇವಸ್ಥಾನ. ತೀರ್ಥ ತೊಟ್ಟಿ ಎಂದರೆ ಪವಿತ್ರ ನೀರಿನ ತೊಟ್ಟಿ ಎಂದರ್ಥ. ಇದೊಂದು ನೈಸರ್ಗಿಕ ಚಿಲುಮೆಯಾಗಿದ್ದು ಬೇವು ಮತ್ತಿತರ ಮರಗಳಿಂದ ಸುತ್ತುವರೆದಿದೆ.
ಈ ಮರಗಳ ನಡುವಿರುವ ತೊಟ್ಟಿಯನ್ನು ‘ತೀರ್ಥ ತೊಟ್ಟಿ’ ಎಂದು ಕರೆಯುತ್ತಾರೆ. ಈ ತೊಟ್ಟಿಯು ನೈಸರ್ಗಿಕವಾದದ್ದು ಎಂದೂ ಬತ್ತಿಲ್ಲ ಮತ್ತು ಪವಿತ್ರವಾದದ್ದೆಂದು ಭಾವಿಸಲಾಗುತ್ತದೆ. ಇದರಲ್ಲಿ ಒಂದು ಒಳಮಂಟಪವಿದ್ದು ಇಳಿಯಲು ಮೆಟ್ಟಿಲುಗಳಿವೆ. ಈ ತೀರ್ಥ ತೊಟ್ಟಿಯ ಗೋಡೆಗಳಲ್ಲಿ ಮುರುಗ ಮತ್ತು ವಿನಾಯಕನನ್ನು ಪೂಜಿಸುತ್ತಿರುವ ಸಪ್ತ ಕನ್ನಿಕೆಯರನ್ನು ಕೆತ್ತಲಾಗಿದೆ.


Click it and Unblock the Notifications