ಪೆರಿಯಾಕುಳಂನಲ್ಲಿರುವ ಬಾಲಸುಬ್ರಮಣ್ಯ ದೇವಸ್ಥಾನವು ತಮಿಳುನಾಡಿನ ಬಹುಮುಖ್ಯ ದೇವಸ್ಥಾನಗಳಲ್ಲೊಂದು. ಚೋಳರ ದೊರೆ ರಾಜೇಂದ್ರ ಚೋಳ ಇದನ್ನು ಕಟ್ಟಿಸಿದನು. ಇಲ್ಲಿ 6 ಮುಖದ ಮುರುಗನು(ಸುಬ್ರಹ್ಮಣ್ಯ) ತನ್ನ ಪತ್ನಿಯೊಂದಿಗಿರುವ ವಿಗ್ರಹವಿದೆ. ಇದು ಭೂಮಿಯಿಂದ ಉದ್ಭವವಾಗಿರುವ ಮೂರ್ತಿ ಎಂದು ಹೇಳಲಾಗುತ್ತದೆ. ತಮಿಳನಾಡಿನ 200 ವರ್ಷಗಳಷ್ಟು ಹಳೆಯದಾದ ಈ ದೇವಾಲಯಕ್ಕೆ ಬಹಳ ಮಂದಿ ಭಕ್ತಾದಿಗಳು ಬರುತ್ತಾರೆ.
ಇದು ವರಾಹ ನದಿ ದಂಡೆಯ ಮೇಲಿದೆ. ಇಲ್ಲಿನ ಸ್ಥಳ ಪುರಾಣಗಳ ಪ್ರಕಾರ, ರಾಜನಾದ ರಾಜೇಂದ್ರ ಚೋಳನು ಒಮ್ಮೆ ಆಕಸ್ಮಿಕವಾಗಿ ತನ್ನ ಮರಿಗಳಿಗೆ ಹಾಲೂಣಿಸುತ್ತಿದ್ದ ಹಂದಿಯನ್ನು ಕೊಂದುಬಿಟ್ಟನು. ನಂತರ ದೇವರಾದ ಮುರುಗನು ಹಸಿದಿದ್ದ ಆ ಹಂದಿ ಮರಿಗಳ ಹಸಿವನ್ನು ತಾನೆ ಸ್ವತಃ ತಣಿಸಿದನು. ಈ ದೃಶ್ಯವನ್ನು ನೋಡಿದ ರಾಜನು ಅದರಿಂದ ಪ್ರೇರಿತನಾಗಿ ಈ ದೇವಾಸ್ಥಾನವನ್ನು ಕಟ್ಟಿಸಿದನಂತೆ. ಈ ಕಥೆಯನ್ನು ದೇವಾಲಯದ ಭಿತ್ತಿಗಳ ಮೇಲೆ ಸುಂದರವಾಗಿ ಚಿತ್ರಿಸಲಾಗಿದೆ. ಬಾಲಸುಬ್ರಮಣ್ಯ ದೇವಾಲಯಕ್ಕೆ ಹೋಗಿಬಂದರೆ ಕಾಶಿಗೆ ಹೋಗಿಬಂದಷ್ಟೇ ಪುಣ್ಯ ಲಭಿಸುತ್ತದೆ ಎಂದೂ ಕೂಡ ಹೇಳುತ್ತಾರೆ.


Click it and Unblock the Notifications