ತೇಜ್‍ಪುರದಲ್ಲಿ ಯಾವುದಾದರು ಅತ್ಯಂತ ಮನಮೋಹಕವಾದ ತಾಣವಿದೆ ಎಂದರೆ ಅದು ಖಂಡಿತವಾಗಿ ಕೊಲಿಯ ಭೊಮೊರ ಸೆಟು ಆಗಿರುತ್ತದೆ. ಇದು ನಾಗಾಂವ್ ಮತ್ತು ಸೊನಿಟ್‍ಪುರ್ ಜಿಲ್ಲೆಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ. ಸುಮಾರು 3,015 ಮೀಟರ್ ಉದ್ದವಿರುವ ಈ ಸೇತುವೆಯು ವಾಸ್ತುಶಿಲ್ಪದ ಅದ್ಭುತವೆಂದೆ ಪರಿಗಣಿಸಲ್ಪಟ್ಟಿದೆ. ಈ ಸೇತುವೆಯ ನಿರ್ಮಾಣವು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಮುನ್ನುಡಿ ಹಾಡಿದ ನಿರ್ಮಾಣವಾಗಿ ಗುರುತಿಸಲ್ಪಟ್ಟಿದೆ. ಇದನ್ನು ಪೂರ್ಣಗೊಳಿಸಲು ಸುಮಾರು ಆರು ವರ್ಷಗಳನ್ನು ತೆಗೆದುಕೊಳ್ಳಲಾಯಿತು ( 1981- 1987). ಈ ಸೇತುವೆಯನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಲೋಕಾರ್ಪಣೆ ಮಾಡಿದರು. ಈ ಸೇತುವೆಯನ್ನು ನಿರ್ಮಿಸುವುದಕ್ಕೆ ಮೊದಲು ದೇಶದ ಈ ಭಾಗವು ಸಂಪರ್ಕ ವ್ಯವಸ್ಥೆಯಿಂದ ದೂರವಿತ್ತು. ಏಕೆಂದರೆ ಇಲ್ಲಿ ಅಬ್ಬರಿಸುತ್ತ ಭೋರ್ಗರೆಯುವ ಬ್ರಹ್ಮಪುತ್ರ ನದಿಯು ಇಲ್ಲಿನ ಭಾಗದ ಸಂಪರ್ಕಕ್ಕೆ ಅಡ್ಡಗಾಲು ಹಾಕಿತ್ತು.
ಈ ಸೇತುವೆಗೆ ಅಹೊಮ್‍ನ ಪ್ರಸಿದ್ಧ ಸೇನಾಧಿಪತಿಯಾಗಿದ್ದ, ಕೊಲಿಯ ಭೊಮೊರ ಫುಕನ್‍ರವರ ಹೆಸರನ್ನು ನಾಮಕರಣ ಮಾಡಲಾಗಿದೆ. ಇದು ಕೇವಲ ಕೊಲಿಯ ಭೊಮೊರ ಸೆಟುಗೆ ಮಾತ್ರವಲ್ಲದೆ, ಇಡೀ ಸೊನಿಟ್‍ಪುರ್ ಜಿಲ್ಲೆಗೆ ಜೀವನಾಡಿಯಂತೆ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಸೌಂದರ್ಯದಿಂದಲು ಸಹ ಇದು ಎಲ್ಲರ ಗಮನ ಸೆಳೆಯುತ್ತಿದೆ. ಬ್ರಹ್ಮಪುತ್ರ ನದಿಯ ಒಂದು ದಂಡೆಯಿಂದ ಮತ್ತೊಂದು ದಂಡೆಯ ನಡುವೆ ಚಾಚಿಕೊಂಡಿರುವ ಈ ಸೇತುವೆಯು ನೋಡುವುದಕ್ಕೆ ಭವ್ಯವಾಗಿ ಕಾಣುತ್ತದೆ. ಅದರಲ್ಲೂ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಸಮಯದಲ್ಲಿ ಇದರ ಸೊಬಗು ಮತ್ತಷ್ಟು ಇಮ್ಮಡಿಗೊಳ್ಳುತ್ತದೆ.


Click it and Unblock the Notifications