Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಸಿದ್ದೇಶ್ವರ ದೇವಸ್ಥಾನ

ಸಿದ್ದೇಶ್ವರ ದೇವಸ್ಥಾನ, ಸೋಲಾಪುರ

4

ಸಿದ್ದೇಶ್ವರ ದೇವಾಲಯವು ಅತ್ಯಾಕರ್ಷಕ ಹಾಗೂ ಅಪರೂಪದ್ದೆಂದು ಗುರುತಿಸಬಹುದಾದ ದೇವಾಲಯವಾಗಿದೆ. ಸೋಲಾಪುರದ ಕೀರ್ತಿ ಹೆಚ್ಚಿಸಿರುವ ಈ ದೇವಾಲಯ ಸುತ್ತಲೂ ನೀರಿದ್ದು, ಮಧ್ಯದಲ್ಲಿ ನೆಲೆಗೊಂಡಿರುವ ದೇವಾಲಯವು ನೋಡಲು ರಮಣೀಯವಾಗಿದೆ. ಸೋಲಾಪುರದಲ್ಲೆ ಅತ್ಯಾಕರ್ಷಕ ಛಾಯಾಚಿತ್ರಗ್ರಾಹಿ ತಾಣಗಳಲ್ಲಿ ಇದು ಮೊದಲನೇಯದು ಎನಿಸಿದೆ. ಈ ದೇವಾಲಯವನ್ನು ಮಲ್ಲಿಕಾರ್ಜುನ ಸ್ವಾಮಿಯ ಭಕ್ತರು ನಿರ್ಮಿಸಿದ್ದಾರೆ. ಶ್ರೀಶೈಲ ವಾಸಿಯಾಗಿರುವ ಶ್ರೀ ಸಿದ್ದೇಶ್ವರ ಇಲ್ಲಿನ ಆರಾಧ್ಯ ದೈವ. ಇಲ್ಲಿ ಸಿದ್ದೇಶ್ವರ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸಿದ್ದೇಶ್ವರ ಸ್ವಾಮಿಯು ಶಿವ ಹಾಗೂ ವಿಷ್ಣುವಿನ ಏಕರೂಪವಾಗಿದ್ದು, ಒಂದೆ ಹೆಸರಿನಿಂದ ಗುರುತಾಗಿದ್ದಾನೆ.

ಈ ದೇವಾಲಯವನ್ನು ಸುತ್ತುವರಿದಿರುವ ಕೆರೆಯನ್ನೂ ಸಿದ್ದೇಶ್ವರ ಕೆರೆ ಎಂದೇ ಕರೆಯಲಾಗುತ್ತದೆ. ದೇವಾಲಯದ ಸುತ್ತಲೂ ಕೆರೆಗೆ ತೆರಳಲು ಅನುಕೂಲವಾಗಲೆಂದು ಮೂರು ಗೇಟ್‌ ಇರಿಸಲಾಗಿದೆ. ದೇವಾಲಯದ ಸುತ್ತಲೂ ಹಸಿರು ಹುಲ್ಲು ಬೆಳೆಸಲಾಗಿದೆ. ಒಂದು ಕಿರು ಉದ್ಯಾನವನ್ನೇ ಸಿದ್ಧಪಡಿಸಲಾಗಿದೆ. ಇಲ್ಲೊಂದು ಸಣ್ಣ ಮಂದಿರವೂ ಇದೆ. ಇದು ಸಂತ ನಲತ್ವಾಡ್‌ರಿಗೆ ಮೀಸಲಾಗಿದೆ. ಈ ದೇವಾಲಯದ ಆವರಣದಲ್ಲಿಯೆ ಸಾಕಷ್ಟು ಚಿಕ್ಕಪುಟ್ಟ ಮಂದಿರಗಳು ಇವೆ. ಅವುಗಳಲ್ಲಿ ವಿಠೋಬ, ರುಕ್ಮಿಣಿ ದೇವಾಲಯಗಳು ಮುಖ್ಯವಾದವು. ಸೋಲಾಪುರಕ್ಕೆ ಬಂದಾಗ ಈ ದೇವಾಲಯವನ್ನು ಸಂದರ್ಶಿಸಿ ತೆರಳುವುದು ಶ್ರೇಯಸ್ಕರ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed