Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಕೂಡಲ ಸಂಗಮ

ಕೂಡಲ ಸಂಗಮ, ಸೋಲಾಪುರ

1

ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಧಾರ್ಮಿಕ ತಾಣ ಕೂಡಲ ಸಂಗಮ. ಭೀಮಾ ಹಾಗೂ ಸೀನಾ ನದಿ ದಂಡೆಯ ಮೇಲೆ ಈ ದೇವಾಲಯವಿದೆ. ಸೋಲಾಪುರದ ಹತ್ತಿರವಿರುವ ವೀಕ್ಷಣಾ ಯೋಗ್ಯ ತಾಣಗಳಲ್ಲಿ ಇದೂ ಪ್ರಮುಖವಾದುದಾಗಿದೆ. 800 ವರ್ಷ ಪುರಾತನ ಇತಿಹಾಸವನ್ನು ಈ ಪ್ರದೇಶ ಒಳಗೊಂಡಿದೆ.

ಅತ್ಯಂತ ಪುರಾತನ ಮಂದಿರಗಳನ್ನು ಒಳಗೊಂಡ ತಾಣ ಕೂಡಲ ಸಂಗಮ. ಹೇಮಂದಪಥಿ ಶೈಲಿಯ ವಾಸ್ತುಶಿಲ್ಪ ಬಳಸಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿರುವ ಶಿವ ಲಿಂಗವು ಅತ್ಯಂತ ಅಪರೂಪದ ಹಾಗೂ ನೈಸರ್ಗಿಕ ವಾಗಿ ಲಭಿಸಿದ್ದು, ದೇಶದ ಇನ್ನಾವ ಭಾಗದಲ್ಲೂ ಕಾಣಸಿಗುವುದಿಲ್ಲ. ಕೂಡಲ ಸಂಗಮ ಅಭಿವೃದ್ಧಿ ಸಮಿತಿ ಇದರ ನಿರ್ವಹಣೆಯ ಹೊಣೆ ಹೊತ್ತಿದೆ. ರಾಜ್ಯ ಸರ್ಕಾರವು ಈ ಸಮಿತಿಯನ್ನು ಈ ಉದ್ದೇಶಕ್ಕಾಗಿಯೇ ನೇಮಿಸಿದೆ. ಇದಕ್ಕಾಗಿ ಸರ್ಕಾರ ಅನುದಾನವನ್ನು ಕೂಡ ಸಮಿತಿಗೆ ನೀಡುತ್ತಿದೆ. ನಲದುರ್ಗ ಕೋಟೆ, ನರ ಹಾಗೂ ಮುಡಿ ಜಲಪಾತಗಳು ಇದಕ್ಕೆ ಸಮೀಪವಾಗಿಯೇ ಇವೆ. ಅತ್ಯಂತ ಪ್ರಸಿದ್ಧ ನದಿ ಕೃಷ್ಣಾ ಹಾಗೂ ಘಟಪ್ರಭಾ ಇದಕ್ಕೆ ಸಮೀಪದಲ್ಲಿಯೆ ಹರಿದು ಹೋಗಿವೆ. ಇದಕ್ಕೆ ಸಮೀಪದಲ್ಲೆ ಇನ್ನೊಂದು ಐತಿಹಾಸಿಕ ತಾಣ ಶ್ರೀಶೈಲ ಕೂಡ ಇದೆ.

ಕೂಡಲ ಸಂಗಮದಲ್ಲಿ ಅತ್ಯಂತ ಪುರಾತನ ಹೇಮದಪಂಥಿ ಮಂದಿರವಿದೆ. ಕೂಡಲದ ಅತ್ಯಂತ ವಿಶಿಷ್ಟ ಗುರುತು ಶಿವ ಲಿಂಗ. ಇದು ಬೇರೆಲ್ಲೂ ಕಾಣಸಿಗುವುದಿಲ್ಲ. ಅಲ್ಲದೆ ಸಾಮಾಜಿಕ ಸುಧಾರಕ ಹಾಗು ಸಂತ ಬಸವೇಶ್ವರರು ಕೂಡಲಸಂಗಮದಲ್ಲೇ ಇದ್ದಾರೆ ಎನ್ನುವ ನಂಬಿಕೆ ಭಕ್ತರಲ್ಲಿ ಇಂದಿಗೂ ಇದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed