Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಅಸರ್‌ ಮಹಲ್

ಅಸರ್‌ ಮಹಲ್, ಸೋಲಾಪುರ

1

ಅರಸರ ಆಳ್ವಿಕೆ ಇದ್ದ ಸಂದರ್ಭದಲ್ಲಿ ನ್ಯಾಯದಾನ ಮಾಡುವ ಸಭಾಂಗಣವಾಗಿ ಅಸರ್‌ ಮಹಲ್‌ ಕಾರ್ಯನಿರ್ವಹಿಸುತ್ತಿತ್ತು. 1646 ರಲ್ಲಿ ಅರಸನಾಗಿದ್ದ ಮೊಹಮ್ಮದ್‌ ಆದಿಲ್‌ ಷಾ ಮಾರ್ಗದರ್ಶನದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಪುರಾತನ ನಿರ್ಮಾಣವಾಗಿದ್ದು, ಮೂರುವರೆ ಶತಮಾನದ ಹಿನ್ನಲೆಯನ್ನು ಒಳಗೊಂಡಿದೆ.

ಅಸರ್‌ ಮಹಲ್‌ ಕೇವಲ ನ್ಯಾಯದಾನ ಸಭಾಂಗಣವಾಗಿ ಮಾತ್ರವಲ್ಲ, ಒಂದು ಅಪರೂಪದ ನಿರ್ಮಾಣ, ತಾಣವಾಗಿಯೂ ಪ್ರಸಿದ್ಧಿ ಹೊಂದಿದೆ. ಇಡಿ ಸ್ಮಾರಕವು ಸಾಕಷ್ಟು ಆಕರ್ಷಣೆಗಳಿಂದ ಕೂಡಿದ್ದು, ನೋಡುಗರನ್ನು ತಕ್ಷಣ ಸೆಳೆಯುತ್ತವೆ. ಉರುಸ್‌ ಉತ್ಸವ ಇಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ಪ್ರತಿ ವರ್ಷ ಉತ್ಸವ ಆಯೋಜಿಸಿ ಸಾವಿರಾರು ಮಂದಿ ಸಮ್ಮುಖದಲ್ಲಿ ಆಚರಣೆ ನಡೆಸಲಾಗುತ್ತದೆ. ಅಲ್ಲದೆ ಇಲ್ಲಿನ ಇಮಾರತ್ತಿನಲ್ಲಿ ಅಪಾರವಾಗಿ ಸೆಳೆಯುವ ಆಕರ್ಷಕ ಪೇಂಟಿಂಗ್‌ಗಳು ಕಾಣಸಿಗುತ್ತವೆ.

ಈ ಇಮಾರತ್ತಿನ ಮುಂಭಾಗದಲ್ಲಿ ಚೌಕಾಕಾರದ ಒಂದು ಟ್ಯಾಂಕ್‌ ಇದೆ. ಇದನ್ನು ಇಲ್ಲಿನ ಶ್ರೀಮಂತ ಮಹಿಳೆಯರಿಗಾಗಿ ನಿರ್ಮಿಸಲಾಗಿತ್ತು. ಇಲ್ಲಿಯೆ ಮೂರು ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಅತಿ ದೊಡ್ಡ ಕೊಳವು ಸುಮಾರು 15 ಅಡಿ ಆಳವಾಗಿದೆ. ಉಳಿದೆರಡು ಟ್ಯಾಂಕ್‌ಗಳು ಚಿಕ್ಕದಾಗಿದ್ದು, ಆಳವೂ ಕಡಿಮೆ ಇವೆ.

ಐತಿಹಾಸಿಕ ಕಟ್ಟಡ ಅಸರ್‌ ಮಹಲ್‌ ಹಿಂಭಾಗ ಹಳೆಯ ಮಸೀದಿಯೊಂದಿದೆ. ಈ ಮಸೀದಿಯ ಮೇಲೆ ವಿಶಾಲವಾದ ಪ್ರಾರ್ಥನಾ ಗೋಡೆಯಿದೆ. ಈ ಮಸೀದಿಯ ಪ್ರವೇಶ ದ್ವಾರವೇ ಅದ್ಭುತವಾಗಿದೆ. ಆಕರ್ಷಕವಾಗಿ ಕಲ್ಲಿನಿಂದ ಕಟ್ಟಿದ ಪ್ರವೇಶದ್ವಾರ ಎಲ್ಲರ ಗಮನ ಸೆಳೆಯುತ್ತದೆ. ಇದು ಮಹಲ್‌ನಿಂದ ಒಂದು ಕಿ.ಮೀ. ದೂರದಲ್ಲಿದೆ ಅಷ್ಟೆ. ಪ್ರಸ್ತುತ ಈ ಅಸರ್‌ ಮಹಲ್‌ ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಅಧಿನದಲ್ಲಿ ನಿರ್ವಹಣೆಯಾಗುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed