ಕರೆಂಗ್ ಘರ್ ಸಿಬ್ಸಾಗರ್ ನಿಂದ 15 ಕಿ.ಮೀ ದೂರದಲ್ಲಿದ್ದು ಗುರಗಾಂವ್ ಎಂದು ಇದನ್ನು ಕರೆಯಲಾಗುತ್ತದೆ. ಅಹೋಮರ ಕಾಲದಲ್ಲಿ ಗುರಗಾಂವ್ ಮಹತ್ವದ ಸ್ಥಳವಾಗಿತ್ತು. 1752 ರಲ್ಲಿ ಅಹೋಮರ ರಾಜ ರಾಜೇಶ್ವರ ಸಿಂಘಾ ಈ ಸ್ಥಳವನ್ನು ಕಟ್ಟಿದ್ದನು.
ಕಾರೆಂಗ್ ಘರ್ ಏಳು ಮಹಡಿಗಳ ಕಟ್ಟಡವಾಗಿದೆ. ಇಲ್ಲಿ ಮೂರು ಮಹಡಿಗಳು ನೆಲಮಹಡಿಗಳಾಗಿದ್ದು ಅವುಗಳನ್ನು ತಲಾತಲ್ ಘರ್ ಎಂದು ಕರೆಯಲಾಗುತ್ತದೆ. ಈ ಸಂಪೂರ್ಣ ಕಟ್ಟಡವನ್ನು ತಲಾತಲ್ ಘರ್ ಎಂದೇ ಕರೆಯುತ್ತಾರೆ ಹೀಗೆ ಕರೆಂಗ್ ಘರ್ ತಲಾತಲ್ ಘರ್ ನ ಒಂದು ಭಾಗವಾಗಿದೆ.
ಮೇಲಿನ ಮಹಡಿಗಳು ಅಂದರೆ ಕರೆಂಗ್ ಘರ್ ಎಂದು ಕರೆಯಲಾಗುವ ಮಹಡಿಗಳಲ್ಲಿ ಮುರು ಮಹಡಿಗಳಿವೆ ಹಾಗೂ ಮೇಲಿನ ಮಹಡಿಯಲ್ಲಿ ಗೋಮಟಾಕಾರಾದ ರಚನೆಯಿದೆ. ಇಲ್ಲಿ ಮೊದಲಿಗೆ ನಾಲ್ಕು ಗಡಿಯಾರದ ಗೋಪುರಗಳಿದ್ದವು. ಈಗ ಕೇವಲ ಎರಡು ಮಾತ್ರ ಉಳಿದುಕೊಂಡಿವೆ. ಇದನ್ನು ತಲುಪಲು ರಸ್ತೆ ಮಾರ್ಗವಾಗಿ ಮೂವತ್ತು ನಿಮಿಷಗಳ ದಾರಿಯಿದೆ.