Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಸ್ವೀಟ್ ಫಾಲ್ಸ್

ಸ್ವೀಟ್ ಫಾಲ್ಸ್, ಶಿಲ್ಲಾಂಗ್

1

ಸ್ವೀಟ್ ಫಾಲ್ಸ್ ಎಂಬುದು ಶಿಲ್ಲಾಂಗ್ ನ ಅತಿ ಮೊನಚಾದ ಮತ್ತು ಸುಂದರವಾದ ಜಲಪಾತವಾಗಿದೆ.  ಸ್ಥಳೀಯವಾಗಿ ಇದನ್ನು ವೈಟ್‍ಡೆನ್ ಎಂದು ಕರೆಯುತ್ತಾರೆ.  ಈ ಜಲಪಾತವು 96 ಮೀ. ಗಳಷ್ಟು ಎತ್ತರದಿಂದ, ಕೆಳಗಡೆ ಇರುವ ಕಪ್ಪು ಬಂಡೆಗಳ ಮೇಲೆ ಧುಮುಕುತ್ತದೆ ಮತ್ತು ವಿವಿಧ ಹಂತಗಳಲ್ಲಿ ಸಣ್ಣ ಸಣ್ಣ ಶಾಖೆಗಳಾಗಿ ವಿಭಜನೆಗೊಳ್ಳುತ್ತದೆ.  ಮಳೆಗಾಲದಲ್ಲಂತೂ, ಜಲಪಾತವು ವೇಗವನ್ನು ಪಡೆದುಕೊಂಡು, ರಭಸವಾಗಿ, ಮೈದುಂಬಿ ಹರಿಯುತ್ತದೆ.  ಆ ದೃಶ್ಯವು ಉಸಿರು ಬಿಗಿಹಿಡಿದು ನೋಡುವಂತಹ ರೋಮಾಂಚಕಾರಿ ನೋಟವಾಗಿರುತ್ತದೆ.

ಈ ಜಲಪಾತವು ತನ್ನ ಭವ್ಯತೆ, ಅಗಾಧತೆಯ ಕಾರಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆಯೇ ಹೊರತು, ಪ್ರಾಯಶಃ ನೀರಿನ ರುಚಿಗೆ ಸಂಬಂಧಿಸಿ ಅಲ್ಲ.  ಮಳೆಗಾಲದಲ್ಲಿ ಬಂಡೆಗಳ ತುದಿಗಳು ಒದ್ದೆಯಾಗಿದ್ದು, ಜಾರುತ್ತವೆಯಾದ್ದರಿಂದ ಈ ಸಂದರ್ಭದಲ್ಲಿ ಜಲಪಾತವನ್ನು ವೀಕ್ಷಿಸುವಾಗ ಎಚ್ಚರದಿಂದಿರಬೇಕು.

ಶಿಲ್ಲಾಂಗ್ ನ ಹೊರವಲಯದ ಹ್ಯಾಪಿ ವ್ಯಾಲಿ ಎಂಬಲ್ಲಿ ಸ್ವೀಟ್ ಫಾಲ್ಸ್ ಇದ್ದು ಇಲ್ಲಿಗೆ ಸುಲಭವಾಗಿ ತಲುಪಬಹುದು. ಈ ಪ್ರವಾಸಿ ತಾಣವನ್ನು ತಲುಪಲು ಸ್ಥಳೀಯವಾಗಿ ಲಭ್ಯವಿರುವ ಟ್ಯಾಕ್ಸಿಗಳನ್ನು ಕಾದಿರಿಸಬಹುದು.  ಸ್ಥಳೀಯರು ಇಲ್ಲಿಗೆ ನಿಯಮಿತವಾಗಿ ಭೇಟಿ ಕೊಟ್ಟು ಪ್ರಕೃತಿಯನ್ನು ಆಸ್ವಾದಿಸುತ್ತಾರೆ. ಇತ್ತೀಚೆಗೆ ಮೇಘಾಲಯದ ಪ್ರವಾಸೋದ್ಯಮ ಇಲಾಖೆಯು ಜಲಪಾತದ ಸುತ್ತಮುತ್ತಲ ಪ್ರದೇಶವನ್ನು ಸುಂದರವಾಗಿ ಅಭಿವೃದ್ಧಿಗೊಳಿಸಿದೆ ಮತ್ತು ಪ್ರವಾಸಿಗರು ಸುಲಭವಾಗಿ ತಲುಪುವಂತೆ ಮಾಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed