ಜುನ್ಜುನು ರಾಜಸ್ಥಾನದ ಶೇಖಾವತಿ ಪ್ರಾಂತ್ಯದಲ್ಲಿರುವ ಒಂದು ಪಟ್ಟಣವಾಗಿದೆ. ಈ ಪಟ್ಟಣವು ತನ್ನಲ್ಲಿರುವ ಸುಂದರವಾಗಿ ಶೃಂಗರಿಸಲ್ಪಟ್ಟಿರುವ ಹವೇಲಿಗಳಿಗೆ ಪ್ರಸಿದ್ಧಿ ಪಡೆದಿದೆ. 18ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿರುವ ಖೇತ್ರಿ ಮಹಲ್, ಬಿಹಾರ್ಟಜೀ ದೇವಾಲಯ ಮತ್ತು ಮೆರ್ತಾನಿ ಬಾವ್ರಿಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಶೇಖಾವತಿ ಪ್ರಾಂತ್ಯದಲ್ಲಿರುವ ಹವೇಲಿಗಳಲ್ಲಿಯೆ ಸೇಠ್ ಈಶ್ವರ್‌ದಾಸ್ ಮೋಹನ್ ದಾಸ್ ಮೋಡಿ ಹವೇಲಿಯು ಅತ್ಯುತ್ತಮವೆನಿಸಿದೆ.19ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ತಿಬ್ರೆವಾಲಾ ಹವೇಲಿಯು ತನ್ನಲ್ಲಿರುವ ಬಣ್ಣದ ಗಾಜುಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ನವಾಬ್ ಸಮಸ್ಖಾನ್ರರ ಮಕ್ಬಾರ, ಜೊರವಾರ್ ಖೇತ್ರಿ ಮಹಲ್, ಲಕ್ಷ್ಮೀ ನಾಥ್ ದೇವಾಲಯ, ಅಜೀತ್ ಸಾಗರ್ ಮತ್ತು ನವಾಬ್ ರೊಹಿಲ್ಲ ಖಾನ್ರವ ಮಕ್ಬಾರಗಳು ಈ ಪಟ್ಟಣದ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.


Click it and Unblock the Notifications