ಸೇನಾಪತಿಯಿಂದ ಅನತಿ ದೂರದಲ್ಲಿ ಪುರುಲ್ ಇದೆ. ಇಲ್ಲಿ ಮಣಿಪುರದ ಶ್ರೀಮಂತ ಸಂಪ್ರದಾಯಗಳನ್ನು ಕಾಣಬಹುದು. ಇಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮ ಜೀವನಕ್ಕೆ ಸುಂದರ ನೆನಪುಗಳನ್ನು ಸೇರಿಸುತ್ತದೆ.ಇದು ಸ್ಥಳೀಯ ಕ್ರೀಡೆಗಳಾದ ತೌತೌ ಮತ್ತು ಕುಸ್ತಿಯ ತವರುನೆಲ. ತೌತೌ ಅನ್ನು ಹೊಸವರ್ಷದ ಹಬ್ಬದಲ್ಲಿ, ಪೌಕಿ ಹಬ್ಬದ ಸಂಜೆ ಆಡುತ್ತಾರೆ. ಕುಸ್ತಿಯನ್ನು ಮೇ ತಿಂಗಳಲ್ಲಿನ ಭತ್ತದ ನಾಟಿ ಸಂದರ್ಭದಲ್ಲಿ ಆಡುತ್ತಾರೆ. ಇದಲ್ಲದೆ ಇಲ್ಲಿನ ಹೆಂಗಸರು ಸಾಂಪ್ರದಾಯಿಕ ನೇಯ್ಗೆಯಲ್ಲಿ ನಿಷ್ಣಾತರು. ಗಿಡಗಳಿಂದ ತೆಗೆದ ಎಳೆಗಳನ್ನು ಬಟ್ಟೆಯ ನೇಯ್ಗೆಗೆ ಬಳಸುತ್ತಾರೆ.


Click it and Unblock the Notifications