ಪ್ರತಾಪ್ ಘರ್ ಕೋಟೆಯು ರಾಜಸ್ಥಾನದ ಸರಿಸ್ಕ ಬಳಿಯ ಪ್ರತಾಪ್ ಘರ್ ನಗರದ ಸಮೀಪದಲ್ಲಿ ನೆಲೆಸಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು, ತನ್ನ ಸ್ವಾಭಾವಿಕವಾದ ಸೌಂದರ್ಯದಿಂದಾಗಿ ಗಮನ ಸೆಳೆಯುತ್ತದೆ. ಪ್ರತಾಪ್ ಘರ್ ನಗರವು ಭಂಗಾರ್ ನಗರದೊಂದಿಗೆ ಐತಿಹಾಸಿಕವಾಗಿ ಮತ್ತು ಅದರ ದಂತಕಥೆಗಳ ಕುರಿತಾಗಿ ಗಾಢವಾದ ಸಂಬಂಧವನ್ನು ಹೊಂದಿದೆ. ಈ ಐತಿಹಾಸಿಕ ಕೋಟೆಯು ಬೆಟ್ಟದ ಮೇಲೆ ನೆಲೆಸಿದ್ದು, ಪ್ರತಾಪ್ ಘರ್ ನಗರ ಮತ್ತು ಸುತ್ತಲಿನ ಭೂಭಾಗದ ಸುಂದರ ಪಕ್ಷಿನೋಟವನ್ನು ಒದಗಿಸುತ್ತದೆ.


Click it and Unblock the Notifications