Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಿಸ್ಕ » ಆಕರ್ಷಣೆಗಳು » ಭಂಗಾರ್ ಕೋಟೆ

ಭಂಗಾರ್ ಕೋಟೆ, ಸರಿಸ್ಕ

1

ಭಂಗಾರ್ ಕೋಟೆಯು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನೆಲೆಸಿದೆ. ಇದೊಂದು ಮಧ್ಯಕಾಲೀನ ಕಾಲದ ಕೋಟೆಯಾಗಿದೆ. ಈ ಕೋಟೆಯನ್ನು ಮೊಘಲರ ಪ್ರಸಿದ್ಧ ದಂಡನಾಯಕ ಮಾನ್ ಸಿಂಗ್ ಅಂಬೆರ್ ನ ಮಗ ಮಾಧೋ ಸಿಂಗ್ 1613 ರಲ್ಲಿ ನಿರ್ಮಿಸಿದನು. ಸುತ್ತಲು ಪಾಳು ಬಿದ್ದ ಗೋಡೆಗಳನ್ನು ಹೊಂದಿರುವ ಈ ಕೋಟೆಯು ಪ್ರಸ್ತುತ ಭಾಗಶಃ ಶಿಥಿಲಾವಸ್ಥೆಯಲ್ಲಿದೆ.ಕೋಟೆಯ ಆವರಣವು ಸ್ವಾಭಾವಿಕವಾದ ನೀರಿನ ಬುಗ್ಗೆಗಳನ್ನು , ಜಲಪಾತಗಳನ್ನು , ಉದ್ಯಾನವನಗಳನ್ನು, ಹವೇಲಿಗಳನ್ನು ಮತ್ತು ಆಲದ ಮರಗಳನ್ನು ಹೊಂದಿದೆ. ಸೋಮೇಶ್ವರ ಸ್ವಾಮಿ, ಗೋಪಿನಾಥ, ಮಂಗಲಾದೇವಿ ಮತ್ತು ಕೇಶವ ರೈ ಸ್ವಾಮಿಗಳ ದೇವಾಲಯಗಳು ಸಹ ಇಲ್ಲಿವೆ.ಅಲ್ಲದೆ ಬೆಟ್ಟದ ಮೇಲೊಂದು ಛಾತ್ರಿಯಿದ್ದು ಅದು ಈ ಸುತ್ತ- ಮುತ್ತಲ ಪ್ರದೇಶದಿಂದ ಪ್ರತ್ಯೇಕಿಸುತ್ತದೆ.ಜನರ ನಂಬಿಕೆಯಂತೆ ಭಂಗಾರ್ ಕೋಟೆ ಮತ್ತು ನಗರವು ಒಂದು ಸುಮಾರು ಶತಮಾನಗಳಿಂದ ಶಾಪಗ್ರಸ್ಥವಾಗಿದೆ. ದಂತಕತೆಗಳ ಪ್ರಕಾರ ಭಂಗಾರ್ ಕೋಟೆಯು ಬಾಬಾ ಬಾಲನಾಥ್ ಎಂಬ ಒಬ್ಬ ಸನ್ಯಾಸಿಯಿಂದ ಶಾಪಗ್ರಸ್ಥವಾಯಿತಂತೆ. ಕಾರಣ ಅಜಬ್ ಸಿಂಗ್ ತನ್ನ ತಾತ ಮಾಧೋ ಸಿಂಗ್ ಬಾಬಾ ಬಾಲನಾಥ್ ರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ ಕಾರಣ ಆ ಯೋಗಿಗಳು ಶಾಪ ನೀಡಿದರಂತೆ. ಹಾಗಾಗಿ ಕೋಟೆ ಕಟ್ಟಲ್ಪಟ್ಟ ನಂತರ ನಿರ್ವಸತಿಯಾಯಿತು ಮತ್ತು ನಗರವು ಹಾಳಾಯಿತು . ಹಾಗಾಗಿ ಇಡೀ ಕೋಟೆಯೆ ಭೂತಬಂಗಲೆಯಂತೆ ಹಾಳು ಬಿದ್ದಿತು ಎಂದು ಜನರು ಇಂದಿಗು ನಂಬುತ್ತಾರೆ.ಭಾರತೀಯ ಪುರಾತತ್ವ ಇಲಾಖೆಯವರು(ASI) ನಡೆಸಿದ ಉತ್ಖನನಗಳು ಈ ನಗರವೊಂದು ಇತಿಹಾಸ ಪೂರ್ವಕಾಲದ ನಿವೇಶನವಾಗಿತ್ತು ಎಂಬುದನ್ನು ಸಾಭೀತು ಮಾಡಿದೆ. ASI ಸೂರ್ಯೋದಯಕ್ಕು ಮೊದಲು ಮತ್ತು ಸೂರ್ಯಾಸ್ತದ ನಂತರ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುವುದನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಿದೆ. ಏಕೆಂದರೆ ಭಂಗಾರ್ ನ ವಿಲಕ್ಷಣವಾದ ವಾತಾವರಣವು ಪ್ರವಾಸಿಗರಲ್ಲಿ ಒಂದು ವಿಧವಾದ ಭೀತಿಯುತ ಅಸೌಖ್ಯವನ್ನುಂಟು ಮಾಡುತ್ತದೆ. ಹಾಗಾಗಿ ಈ ನಿರ್ಬಂಧ ಜಾರಿಯಲ್ಲಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu