ನಲ್ದೇಶ್ವರ್ ದೇವಾಲಯವು ರಾಜಸ್ಥಾನದ ಸರಿಸ್ಕ- ಅಲ್ವರ್ ಹೆದ್ದಾರಿಯ ನಡುವೆ ಕಾಣಸಿಗುತ್ತದೆ. ಇದೊಂದು ಶಿವನ ದೇವಾಲಯವಾಗಿದೆ. 18 ನೇ ಶತಮಾನ ಈ ದೇವಾಲಯವು ದಟ್ಟವಾದ ಕಾಡಿನಿಂದ ಆವೃತವಾಗಿದೆ. ಹಚ್ಚ ಹಸಿರಿನಿಂದ ಕೂಡಿದ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ದೇವಾಲಯವು ತನ್ನ ಸೊಬಗಿನಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.


Click it and Unblock the Notifications