ರಾಜ್ ಪಿಪ್ಲಾ ದಿಂದ ಸುಮಾರು 28 ಕಿ.ಮೀ ದೂರದಲ್ಲಿ ಜರ್ವಾನಿ ಪರಿಸರ ಶಿಬಿರವಿದೆ ಇದು ನರ್ಮದಾ ಅಣೆಕಟ್ಟಿನ ಕೆವಾಡಿಯಾ ವಸತಿ ಸಂಕೀರ್ಣಕ್ಕೆ ಸಮೀಪದಲ್ಲಿದೆ. ಇಲ್ಲಿ ವನ್ಯಜೀವಿಗಳನ್ನು ಗೌರವ ಭಾವದಿಂದ ಕಾಣಲಾಗುತ್ತದೆ ಮತ್ತು ಅವುಗಳ ಸಂರಕ್ಷಣೆಯನ್ನೂ ಮಾಡಲಾಗುತ್ತದೆ. ಇಲ್ಲಿ ಇರುವ ವಿವಿಧ ಜಾತಿಯ ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಬಾರ್ಕಿಂಗ್ ಡೀರ್ ಹಾಗೂ ಚಿಕ್ಕ ಬಾಲದ ಕೋತಿ ಗಳು ಹೆಚ್ಚಾಗಿವೆ ಹಾಗೂ ಇಲ್ಲಿನ ಆಕರ್ಷಣೆಯಾಗಿದೆ.
ಇಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳ ಸಹಾಯದಿಂದ ನೀವೊಂದು ಚಾರಣವನ್ನೂ ಆಯೋಜಿಸಬಹುದಾಗಿದೆ ಹಾಗೂ ಇಲ್ಲಿನ ಚಾರನದ ಅನುಭವ ನಿಮ್ಮ ಜೊತೆಗೆ ಸದಾ ಇರುತ್ತದೆ. ಜ಼ವಾರಿ ಜಲಪಾತಗಳು, ಶೂಲ್ಪನೇಶ್ವರ ದೇವಾಲಯ ಮತ್ತು ಘೀರ್ ಖಾಡಿ ಇಲ್ಲಿಯೆ ಸಮೀಪವಿರುವ ಇತರೆ ಆಕರ್ಷಣೆಗಳಾಗಿವೆ.


Click it and Unblock the Notifications