ನರ್ಮದಾ ನದಿಯ ಸಮೀಪದಲ್ಲಿರುವ ವಿಶಾಲ್ ಖಡಿ ಪರಿಸರ ಶಿಬಿರ ನರ್ಮದಾ ನದಿಯಿಂದ ಸುಮಾರು 20 ಕಿ.ಮೀ ದೂರದ ರಾಕ್ ಪಿಪ್ಲಾದಲ್ಲಿದೆ. ಈ ಶಿಬಿರವು ಕರ್ಜನ್, ದೆಡಿಯಾಪಾದಾ ಮತ್ತು ದಾಂಗ್ ಅರಣ್ಯದಿಂದ ಆವೃತವಾಗಿದೆ. ಚಂದೋಡ್ ಮತ್ತು ಗರುಡೇಶ್ವರ ಘಾಟ್ ಗಳ ಮೇಲಿರುವ ದಹೋಬಿ ಕೋಟೆ, ಜಗಾಡಿಯಾ ದಲ್ಲಿರುವ ಜೈನ ದೇವಾಲಯ ಹಾಗೂ ಇಲ್ಲಿನ ಜಲಪಾತಗಳು ಕಣ್ಮನ ಸೆಳೆಯುವ ಸ್ಥಳಗಳಾಗಿವೆ.
ಇಲ್ಲಿ ಟೆಂಟ್ ಹಾಕುವ ಸ್ಥಳ ಮುಂತಾದ ಪ್ರವಾಸಿ ಸ್ನೇಹಿ ವ್ಯವಸ್ಥೆಗಳಿವೆ. ವಿಶೇಷವಾದ ಊಟದ ಸ್ಥಳಗಳು, ವೀಕ್ಷಣಾ ಗೋಪುರ, ವನ್ಯಜೀವಿಗಳನ್ನು ನೊಡಲು ಮಚ್ಚನ್ಸ್ ಇತ್ಯಾದಿಗಳು ಪರಿಸರ ಶಿಬಿರದ ವಿಶೇಷವಾಗಿದೆ.


Click it and Unblock the Notifications