ಗೋವಾದ ಸನ್ವೊರ್ಡೆಮ್ ಪಟ್ಟಣವು ಪ್ರವಾಸಿ ಆಕರ್ಷಣೆಗಳಾದ ಕೋಲ್ವಾ ಬೀಚ್, ಸಾಲ್ಸೆಟ್ ಮತ್ತು ಬೆನೌಲಿಮ್ ಗಳಿಗೆ ಹತ್ತಿರವಾಗಿದೆ. ಪಣಜಿಯಲ್ಲದೆ ಗೋವಾದ ಇತರೆ ಭಾಗಗಳಿಗೆ ಸಂಪರ್ಕವನ್ನು ಹೊಂದಿದ ಮಾರ್ಗೊ ರೈಲು ನಿಲ್ದಾಣವು ಸನ್ವೊರ್ಡೆಮ್ ನಿಂದ ಕೇವಲ 6 ಕಿ.ಮೀ ದೂರದಲ್ಲಿದೆ. ಸುಮಾರು 6 ಅಥವಾ 7 ನೇ ಶತಮಾನದಲ್ಲಿ ರೂಪಿಸಲಾಗಿರುವ ಎಂದು ನಂಬಲಾಗಿರುವ ರಿವೊನಾ ಎಂಬ ಹೆಸರಿನಿಂದ ಕರೆಯಲ್ಪಡುವ ಗುಹೆಗಳು ಸನ್ವೊರ್ಡೆಮ್ ಹತ್ತಿರದಲ್ಲಿದ್ದು, ಛಾಯಾಚಿತ್ರಗಾರರಿಗೆ ಇದೊಂದು ತಿರಸ್ಕರಿಸಲಾಗದಂತಹ ಔತಣ. ಗೋವಾದಲ್ಲಿ ಬೌದ್ಧ ಧರ್ಮದ ಉಪಸ್ಥಿತಿಯನ್ನು ಇವು ಸೂಚಿಸುತ್ತವೆ. ಸನ್ವೊರ್ಡೆಮ್ ಪ್ರತಿ ಭಾನುವಾರದಂದು ಸಂತೆಯಾಗಿ ಮಾರ್ಪಡುತ್ತದೆ.


Click it and Unblock the Notifications