ಬೌದ್ಧ ವಿಹಾರವು ಬೌದ್ಧ ಸಂಸ್ಕೃತಿಯ ಉತ್ಕೃಷ್ಟವಾದ ಕೇಂದ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ. ಈ ವಿಹಾರ ಬೌದ್ಧ ಸನ್ಯಾಸಿಗಳ ವಾಸ ಸ್ಥಾನವಾಗಿದ್ದು, ಇಲ್ಲಿ ಮರದ ಕೆತ್ತನೆಗಳು ಕಾಣಿಸುವುದಿಲ್ಲ. ವಿಹಾರದ ಒಳಗೆ ಸಾಮುದಾಯಿಕ ಚಟುವಟಿಕೆಗಳಿಗೆ ತುಂಬಾ ಸ್ಥಳವಿದೆ. ಈ ಜಾಗವು ಸಾಂಚಿಯಿಂದ ಕೆಲವೇ ಕಿಲೋಮೀಟರು ಗಳಷ್ಟು ದೂರದಲ್ಲಿದ್ದು, ಇದು ಮಧ್ಯ ಪ್ರದೇಶದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು ಎಂದು ತಿಳಿಯಲ್ಪಡುತ್ತದೆ. ಈ ವಿಹಾರದಲ್ಲಿ ಸತ್ಧರ ಸ್ತೂಪದ ಅವಶೇಷಗಳಿವೆ.
ವಿಹಾರದಲ್ಲಿ ಒಂದು ಒಳ ಕೋಣೆಯಿದ್ದು, ಇಲ್ಲಿ ಎಲ್ಲಾ ಅವಶೇಷಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿದೆ. ಈ ಎಲ್ಲಾ ವಿಹಾರಗಳಲ್ಲಿ ವಿವಿಧ ಆಕರ್ಷಕ ಗುಣ ಲಕ್ಷಣಗಳಿವೆ. ವಿಹಾರದ ಒಳಗೆ ಸಣ್ಣ ಕೋಣೆಗಳಿದ್ದು, ಅದಕ್ಕೆ ಬಾಗಿಲು ಹಾಗೂ ಹಾಸುಗೆಯಂತೆ ಬಳಸುವ ಎರಡು ವೇದಿಕೆಗಳಿವೆ. ಬೌದ್ಧ ಸಂಪ್ರದಾಯದ ಮಿಣುಕು ನೋಟ ಪಡೆಯಲು ಪ್ರಪಂಚದಾದ್ಯಂತದಿಂದ ನೂರಾರು ಪಯಣಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.


Click it and Unblock the Notifications