ಮಹಾನದಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕವೇ ಚಿಪಿಲಿಮಾ ಜಲವಿದ್ಯುತ್ ಯೋಜನೆ. ಇದು ಸಂಬಾಲ್ಪುರದಿಂದ 32 ಕಿಮೀ ದೂರದಲ್ಲಿದೆ. ಇದು ನಗರದ ಶಬ್ದ ಮತ್ತು ವಾಯುಮಾಲಿನ್ಯದಿಂದ ದೂರದಲ್ಲಿದೆ. 25 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಜಲಪಾತದಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲಪಾತದ ಸುತ್ತಲ ವಾತಾವರಣವು ನೋಡಲು ನಯನಮನೋಹರವಾಗಿದೆ. ಒಂದು ದಿನದ ಪ್ರವಾಸಕ್ಕೆ ಇಲ್ಲಿಗೆ ಭೇಟಿ ನೀಡಿದರೆ ಈ ಸೌಂದರ್ಯವನ್ನು ಸವಿಯಬಹುದು. ಬೆಳ್ನೊರೆಯಾಗಿ ಧುಮ್ಮಿಕ್ಕುವ ಈ ಜಲಪಾತಕ್ಕೆ ಮಹಾನದಿಯೇ ಮೂಲ. ಪ್ರವಾಸಿಗರು ಇಲ್ಲಿ ನಿಂತು ಸುತ್ತಲ ನೋಟವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಂದ ಪ್ರವಾಸಿಗರು ಇಲ್ಲಿಗೆ ಸಮೀಪದಲ್ಲಿರುವ ಘಂಟೇಶ್ವರಿ ದೇವಾಲಯ ನೋಡಲು ಹೋಗಬಹುದು.


Click it and Unblock the Notifications