ದಲ್ಸಿಂಗ್ ಸರಾಯ್ ವು ಸಮಷ್ಟಿಪುರ ಜಿಲ್ಲೆಯ ಒಂದು ಉಪವಿಭಾಗವಾಗಿದೆ. ಇಲ್ಲಿನ ಕೃಷಿ ಭೂಮಿಯಲ್ಲಿ ಬೆಳೆಸಲಾಗುವ ತರಕಾರಿಯು ಪ್ರವಾಸೋದ್ಯಮದ ಬಹು ಮುಖ್ಯ ಆಕರ್ಷಣೆಯಾಗಿದೆ. ಈ ಪ್ರದೇಶದಲ್ಲಿ ಬೆಳೆಯಲಾಗುವ ಕಾಲಿಫ್ಲವರ್, ಆಲೂಗೆಡ್ಡೆ, ಟೊಮೇಟೊ, ಮತ್ತು ಹಸಿರು ಸಾಗ್ ಬಲು ಪ್ರಸಿದ್ಧವಾಗಿವೆ. ದಲ್ಸಿಂಗ್ ಸರಾಯ್ ಯ ಮಂಡಿಯು ಬಹಳ ಪ್ರಾಮುಖ್ಯತೆಯುಳ್ಳದ್ದಾಗಿದೆ. ತರಕಾರಿಗಳೊಂದಿಗೆ, ಲಿಚಿ ಮತ್ತು ಮಾವಿನ ಹಣ್ಣುಗಳಂತಹ ಫಲವಸ್ತುಗಳನ್ನೂ ಸಹ ಇಲ್ಲಿ ಬೆಳೆಸುತ್ತಾರೆ.


Click it and Unblock the Notifications