Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ರಣಥಂಬೋರ್ ರಾಷ್ಟ್ರೀಯ ಉದ್ಯಾನವನ

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ರಣಥಂಬೋರ್

5

ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಉತ್ತರ ಭಾರತದ  ಅತಿದೊಡ್ಡ ವನ್ಯಜೀವಿಧಾಮವಾಗಿದೆ. ಒಂದಾನೊಂದು ಕಾಲದಲ್ಲಿ ಇದು ರಾಜಮನೆತನದವರ ಶಿಖಾರಿ ತಾಣವಾಗಿತ್ತು. 1955 ರಲ್ಲಿ ಇದನ್ನು ವನ್ಯಜೀವಿಧಾಮವಾಗಿ ಘೋಷಿಸಲಾಯಿತು. 1973 ರಲ್ಲಿ ಇದನ್ನು ಮೊದಲ ಹಂತದ ಹುಲಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಯಿತು. ರಣಥಂಬೋರ್ ವನ್ಯಜೀವಿಧಾಮವು ರಣಥಂಬೋರ್ ರಾಷ್ಟ್ರೀಯ ಉದ್ಯಾನವನವೆಂಬ ಸ್ಥಾನಮಾನವನ್ನು 1980 ರಲ್ಲಿ ಪಡೆಯಿತು. ಈ ರಾಷ್ಟ್ರೀಯ ಉದ್ಯಾನವನವು ಹುಲಿಗಳಲ್ಲದೆ, ನರಿಗಳು, ಚಿರತೆಗಳು, ಕತ್ತೆಕಿರುಬಗಳು, ಮೊಸಳೆಗಳು, ಕಾಡುಹಂದಿಗಳು ಮತ್ತು ವಿವಿಧ ಬಗೆಯ ಜಿಂಕೆಗಳಿಗೆ ಹಾಗು ಇತರ ಕಾಡುಪ್ರಾಣಿಗಳಿಗೆ ಆಶ್ರಯವನ್ನೊದಗಿಸಿದೆ. ಇವುಗಳ ಜೊತೆಗೆ ನೈದಿಲೆಗಳು, ಡಕ್ ವೀಡ್ಸ್ ಮತ್ತು ಕಮಲಗಳಂತಹ ಜಲಸಸ್ಯಗಳಿಗೆ ಈ ಉದ್ಯಾನವನವು ನೆಲೆಕಲ್ಪಿಸಿದೆ.ಅತ್ಯುತ್ತಮವಾದ ಹುಲಿ ಸಂರಕ್ಷಿತ ತಾಣವೆಂದು ರಾಷ್ಟ್ರ ಮಟ್ಟದಲ್ಲಿ ಹೆಸರಾಗಿರುವ ಈ ವನ್ಯಜೀವಿಧಾಮವು 392 ಚ.ಕಿ.ಮೀ ನಷ್ಟು ವ್ಯಾಪಿಸಿದೆ.  ಪ್ರವಾಸಿಗರು ಈ ಉದ್ಯಾನವನದಲ್ಲಿ ಅರಣ್ಯ ಪ್ರಾಧಿಕಾರವು ನಿರ್ಮಿಸಿ , ನಿರ್ವಹಿಸುತ್ತಿರುವ ರಸ್ತೆಗಳ ಮೂಲಕ ಹಾದು ಹೋಗಬಹುದು. ಅರಣ್ಯ ಪ್ರಾಧಿಕಾರವು ಇಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಛಾಯಾಗ್ರಹಣ ಮತ್ತು ವೀಡಿಯೊ ಚಿತ್ರಿಕರಣ ಮಾಡಲು ವ್ಯವಸ್ಥೆ ಮಾಡಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue