Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ಟಾಗೂರ್ ಬೆಟ್ಟ

ಟಾಗೂರ್ ಬೆಟ್ಟ, ರಾಂಚಿ

1

ನಗರದಿಂದ ಉತ್ತರಕ್ಕೆ ಕೇವಲ 4 ಕಿ.ಮೀ ದೂರದಲ್ಲಿರುವ ಟಾಗೂರ್ ಬೆಟ್ಟವು ರಾಂಚಿಯಲ್ಲಿ ಟಾಗೂರರ ನೆನಪನ್ನು ನಮಗೆ ತರುತ್ತದೆ. 1908ರಲ್ಲಿ ರವೀಂದ್ರನಾಥ ಟಾಗೂರರ ಸೋದರ ನೋಬೆಲ್ ಪ್ರಶಸ್ತಿ ವಿಜೇತ ಜ್ಯೋತಿರಿಂದ್ರನಾಥ್ ಟಾಗೂರ್ ಇಲ್ಲಿಗೆ ಭೇಟಿ ನೀಡಿದ್ದರಂತೆ. ಇಲ್ಲಿನ ಮೊರಹ್ಬಡಿ ಬೆಟ್ಟ ಮತ್ತು ಅದಕ್ಕೆ ಹೊಂದಿಕೊಂಡಂತಹ ಇನ್ನಿತರ ಪರಿಸರಕ್ಕೆ ಮಾರು ಹೋದ ಅವರು ಈ ಬೆಟ್ಟದ ತುದಿಯಲ್ಲಿ ಒಂದು ಮನೆಯನ್ನು ನಿರ್ಮಾಣ ಮಾಡಿದರು. ಟಾಗೂರ್ ಬೆಟ್ಟವು 300 ಅಡಿಯಷ್ಟು ಎತ್ತರವಾಗಿದೆ. ಈ ಬೆಟ್ಟವು ಟಾಗೂರ್ ಮನೆತನದ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿರುವುದರಿಂದಾಗಿ ಇದಕ್ಕೆ ಟಾಗೂರ್ ಬೆಟ್ಟವೆಂಬ ಹೆಸರು ಬಂದಿದೆ.

ನಂಬಿಕೆಗಳ ಪ್ರಕಾರ ರವೀಂದ್ರನಾಥ್ ಟಾಗೂರರು ಇಲ್ಲಿನ ಬೆಟ್ಟದ ಮೇಲೆ ಕುಳಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಎಂದು ನಂಬಲಾಗುತ್ತದೆ. ಈ ವಿಶ್ವಕವಿಗೆ ಇಲ್ಲಿನ ಪ್ರಶಾಂತವಾದ ವಾತಾವರಣ ಮತ್ತು ಅನುಪಮ ಸೌಂದರ್ಯವು ಸಾಹಿತ್ಯ ಸೃಷ್ಟಿಗೆ ಅಗತ್ಯ ಪ್ರೇರಣೆಯನ್ನು ಒದಗಿಸಿದ್ದವೆಂದು ಹೇಳಲಾಗುತ್ತದೆ.

ರಾಮಕೃಷ್ಣ ಮಿಷನ್‍ನ ದಿವ್ಯಾಯನ್ ಮತ್ತು ಅಗರಾರಿಯನ್ ವೃತ್ತಿ ಶಿಕ್ಷಣ ಸಂಸ್ಥೆಯು ಟಾಗೂರ್ ಬೆಟ್ಟದ ಬುಡದಲ್ಲಿ ನೆಲೆಗೊಂಡಿದೆ. ಈ ಬೆಟ್ಟವು ಆರೋಹಣ ಮಾಡುವವರಿಗೆ ಮತ್ತು ಏಕಾಂತವನ್ನು ಕಳೆಯಲು ಬಯಸುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue