Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಹವಾಮಾನ

ರಾಂಚಿ ಹವಾಮಾನ

ರಾಂಚಿಗೆ ಭೇಟಿ ನೀಡಲು ವರ್ಷದ ಎಲ್ಲಾ ದಿನಗಳು ಪ್ರಶಸ್ತವಾಗಿರುತ್ತವೆ. ಆದರೂ ಸಹ ಬೇಸಿಗೆಯ ಧಗೆಯ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡದಿರುವುದು ಉತ್ತಮ. ಆಗ ಇಲ್ಲಿ ಉಷ್ಣಾಂಶವು ಗಣನೀಯವಾಗಿ ಏರಿಕೆಯಾಗಿರುತ್ತದೆ.

ಬೇಸಿಗೆಗಾಲ

ರಾಂಚಿಯಲ್ಲಿ ಬೇಸಿಗೆಯು ಮಾರ್ಚ್ ನಿಂದ ಜೂನ್‍ವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು 20° ಯಿಂದ 37° ಸೆಲ್ಶಿಯಸ್‍ವರೆಗೆ ಇರುತ್ತದೆ.

ಮಳೆಗಾಲ

ರಾಂಚಿಯಲ್ಲಿ ಮಳೆಗಾಲವು ಜುಲೈನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಮಿತ ಪ್ರಮಾಣದ ಮಳೆಯನ್ನು ನಾವು ಕಾಣಬಹುದು.

ಚಳಿಗಾಲ

ರಾಂಚಿಯಲ್ಲಿ ಚಳಿಗಾಲವು ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 22° ಸೆಲ್ಶಿಯಸ್ ಮತ್ತು ಕನಿಷ್ಠ 2° ಸೆಲ್ಶಿಯಸ್ ಇರುತ್ತದೆ.