Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ರಾಕ್ ಗಾರ್ಡನ್

ರಾಕ್ ಗಾರ್ಡನ್, ರಾಂಚಿ

1

ನಯನ ಮನೋಹರವಾದ ಕಂಕೆ ಜಲಾಶಯದ ಪಕ್ಕದಲ್ಲಿ ನೆಲೆಸಿರುವ ಪ್ರಸಿದ್ಧ ತಾಣವೇ ರಾಕ್ ಗಾರ್ಡನ್ ( ಶಿಲಾ ಉದ್ಯಾನವನ). ಇದೊಂದು ಕೃತಕ ಉದ್ಯಾನವನವಾಗಿದ್ದು, ಪ್ರವಾಸಿಗರ ಮನೋರಂಜನೆಗೆ ಬೇಕಾದ ಜಲಪಾತಗಳನ್ನು ಮತ್ತು ಶಿಲೆಗಳನ್ನು ಹೊಂದಿವೆ. ಪ್ರಾಚೀನ ಮತ್ತು ಆಧುನಿಕ ಮಾನವನ ಶಿಲ್ಪಕಲಾ ನೈಪುಣ್ಯವನ್ನು, ಸೃಜನಶೀಲತೆಯನ್ನು ಸವಿಯುವ ಭಾಗ್ಯವನ್ನು ನಿಮ್ಮ ಮುಂದೆ ಈ ರಾಕ್ ಗಾರ್ಡನ್ ಒದಗಿಸುತ್ತದೆ. ಇಲ್ಲಿ ಒಂದು ಕಬ್ಬಿಣದ ಸರಳುಗಳ ಸೇತುವೆಯನ್ನು ನಿರ್ಮಿಸಲಾಗಿದೆ. ಇದಕ್ಕೆ ಕೇವಲ ಎರಡು ಕಬ್ಬಿಣದ ಕಂಬಗಳನ್ನು ಆಧಾರವಾಗಿ ನಿಲ್ಲಿಸಲಾಗಿದೆ.

ಈ ಉದ್ಯಾನವನದ ಒಳಗೆ ಹಲವಾರು ವಿಗ್ರಹಗಳನ್ನು ನಿರ್ಮಿಸಲಾಗಿದೆ. ಯುವಜನತೆಗೆ ಈ ಸ್ಥಳವು ಅತ್ಯಂತ ಆಕರ್ಷಣೀಯವಾದ ಸ್ಥಳವಾಗಿ ಜನಪ್ರಿಯವಾಗಿದೆ. ಸ್ವಚ್ಛವಾದ ಪ್ರಶಾಂತ ವಾತಾವರಣದಲ್ಲಿ ಸ್ವಲ್ಪ ಹೊತ್ತು ಕಾಲಕಳೆಯಲು ನೀವು ಇಚ್ಛಿಸಿದಾದಲ್ಲಿ ರಾಂಚಿಯ ರಾಕ್ ಗಾರ್ಡನ್ ಅದಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇದರ ಅಂದಕ್ಕೆ ಪ್ರಕೃತಿಯು ಸಹ ತನ್ನ ಕೊಡುಗೆ ಇರಲಿ ಎಂದು ಇದರ ಸುತ್ತ ಭವ್ಯವಾದ ಪ್ರಾಕೃತಿಕ ನೋಟವನ್ನು ಒದಗಿಸಿದೆ.

ರಾಕ್ ಗಾರ್ಡನ್ ರಾಂಚಿಯ ಆಲ್ಪರ್ಟ್ ಎಕ್ಕ ಚೌಕ್‍ನ ಸಮೀಪದಲ್ಲಿ ಒಂದು ನಯನ ಮನೋಹರವಾದ ಗುಡ್ಡದ ಮೇಲೆ ನೆಲೆಗೊಂಡಿದೆ. ಇಲ್ಲಿನ ಶಾಂತ ಮತ್ತು ಆಹ್ಲಾದಕರ ಪರಿಸರದಲ್ಲಿ ಕಾಲ ಕಳೆದು, ತಮ್ಮ ಮೈ ಮನಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಈ ಗುಡ್ಡದ ಬುಡದಲ್ಲಿರುವ ಕೆರೆಯು ಅತ್ಯಂತ ಸುಂದರವಾಗಿದ್ದು, ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ವಿಶ್ರಾಂತಿ ಬಯಸಿ ಬರುವವರನ್ನು ಈ ಕೆರೆಯು ಕೈ ಬೀಸಿ ಕರೆಯುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed