ನರ್ಲೈ ಎಂಬುದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಪ್ರಸಿದ್ಧ ರಣಕ್ಪುರ್ ಪಟ್ಟಣದಿಂದ 6 ಕಿ,ಮೀ ದೂರದಲ್ಲಿರುವ ಈ ಗ್ರಾಮವು ಒಂದು ಬೆಟ್ಟದ ಬುಡದಲ್ಲಿದೆ. ಈ ಪ್ರಾಂತ್ಯದಲ್ಲಿ ಪ್ರವಾಸಿಗರು ಹಲವಾರು ಜೈನರ ಮತ್ತು ಹಿಂದೂಗಳ ದೇವಾಲಯಗಳನ್ನು ಕಾಣಬಹುದು. ಇಲ್ಲಿರುವ ಜೈನರ ಪ್ರಥಮ ತೀರ್ಥಂಕರನಾದ ಆದಿನಾಥ ದೇವನ ಮಂದಿರವು ತನ್ನ ಭಿತ್ತಿ ಚಿತ್ರಕಲೆ ಮತ್ತು ವಾಸ್ತು ಶಿಲ್ಪದಿಂದಾಗಿ ಪ್ರವಾಸಿಗರ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.


Click it and Unblock the Notifications