ಈಶ್ವರನಿಗಾಗಿ ನಿರ್ಮಿಸಲಾಗಿರುವ ಮುಚ್ಛಲ್ ಮಹಾವೀರ ದೇವಾಲಯವು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿದೆ. . ಇದು ಕುಂಭಾಲ್‍ಘರ್ ವನ್ಯಧಾಮದಿಂದ 5 ಕಿ.ಮೀ ದೂರದಲ್ಲಿರುವ ಘನೇರಾವ್ ಬಳಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಮೀಸೆ ಹೊಂದಿರುವ ಶಿವನ ಮೂರ್ತಿಗಾಗಿ ಹೆಸರುವಾಸಿಯಾಗಿದೆ. ಈ ದೇವಾಲಯದ ಪ್ರವೇಶದ್ವಾರದಲ್ಲಿ ಪಹರೆ ಕಾಯುವ ಭಂಗಿಯಲ್ಲಿ ನಿಂತಿರುವ ಎರಡು ಆನೆಗಳ ವಿಗ್ರಹವನ್ನು ಕಾಣಬಹುದು. ಗರಾಸಿಯ ಬುಡಕಟ್ಟಿನ ಹಳ್ಳಿಗಳು ಇಲ್ಲಿನ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರವಾಸಿಗರು ಇಲ್ಲಿ ಸುಂದರವಾದ ಸಾಂಪ್ರದಾಯಿಕವಾದ ಉಡುಗೆ-ತೊಡುಗೆಗಳನ್ನು ಖರೀದಿಸಬಹುದಾಗಿದೆ.


Click it and Unblock the Notifications