ಡೆರಾ ಬಾಡಾ ಬೀರಮ್ ಶಾ ರಾಜೌರಿ ನಗರದಲ್ಲಿರುವ ಝಂಗಾರ್ ಗ್ರಾಮದ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಹೆಸರೆ ಹೇಳುವಂತೆ ಇಲ್ಲಿ ಬಾಬಾ ಬೀರಮ್ ಶಾ ಜಿ ದತ್ತ್ ಅವರನ್ನು ಪೂಜಿಸಲಾಗುತ್ತದೆ. ಇವರು ಆರನೇಯ ಸಿಖ್ ಗುರು ಹರಗೋಬಿಂದ ಸಾಹೆಬ್ ಜಿ ಅವರ ಭಕ್ತರೆಂದು ಜನರ ನಡುವೆ ಪ್ರಖ್ಯಾತರಾಗಿದ್ದಾರೆ.
ಇಲ್ಲಿನ ಈ ದೇವಾಲಯ 17 ನೇಯ ಶತಮಾನದ ಜೊತೆ ನಂಟು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಖ್ ಧರ್ಮವನ್ನು ಪ್ರಚಾರ ಮಾಡಲೆಂದು ಗುರು ಗೋಬಿಂದ ಸಾಹೆಬ್ ಜಿ ಅವರು ಪಂಜಾಬಿನಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹಲವು ಮಂದಿ ಸಂತರನ್ನು ಕಳುಹಿಸಿದ್ದರು. ಬಾಬಾ ಬೀರಮ್ ಜಿ ಇಂತಹ ಓರ್ವ ಸಂತರಾಗಿದ್ದರು. ಇವರು ನಂತರ ಝಂಗಾರ್ ಗ್ರಾಮದಲ್ಲಿ ಡೇರಾ ವನ್ನು ಕಟ್ಟಿದರು. ಇದೆ ಈಗ ಪ್ರಸಿದ್ಧ ಪ್ರವಾಸಿ ಆಕರ್ಷಣೆ ಆಗಿದೆ. ಪಂಜಾಬ್ ನ ರೈತರು ಆಚರಿಸುವ ಬೈಸಾಖಿಯ ಹಿಂದಿನ ರವಿವಾರದಂದು ಆಚರಿಸುವ ಉತ್ಸವದ ಸಮಯದಲ್ಲಿ ದೊಡ್ಡ ಸಂಖ್ಯೆಯ ಭಕ್ತ ಸಮೂಹ ಇಲ್ಲಿ ಸೇರಿರುತ್ತದೆ.


Click it and Unblock the Notifications