ಹಿಮಾಚಲ ಪ್ರದೇಶ್ ರಾಜ್ಯ ಕಂಗ್ರಾ ಜಿಲ್ಲೆಯಲ್ಲಿರುವ ಕಾಲೇಶ್ವರ್ ಮಹಾದೇವ್ ದೇವಸ್ಥಾನವು ಇಲ್ಲಿನ ಅತ್ಯಂತ ಪುರಾತನ ದೇವಸ್ಥಾನವಾಗಿದೆ. ಪ್ರಾಗ್ಫೂರ್ ನಗರದಿಂದ ಸುಮಾರು 8 ಕಿ.ಮೀ.ದೂರದಲ್ಲಿದ್ದು, ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಭೂಮಿಯ ಒಳಭಾಗದಲ್ಲಿ ದೊರೆತ ಒಂದು ವಿಶೇಷವಾದ 'ಲಿಂಗ'ವನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದ ಗೋಡೆಗಳನ್ನು ವಿಶೇಷವಾದ ವಸ್ತುಗಳಿಂದ ಅಲಂಕರಿಸಲಾಗಿದೆ. ಮಾತಾ ಚಿಂತಪೂರ್ಣಿಯ ಮಹಾ ರುದ್ರ ಎಂಬ ಹೆಸರಿನಿಂದಲೂ ಈ ದೇವಸ್ಥಾನವನ್ನು ಗುರುತಿಸಲಾಗಿದೆ.


Click it and Unblock the Notifications