Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಆಕರ್ಷಣೆಗಳು » ಸ್ವಾಮಿ ಬುಧಾ ಅಮರನಾಥಜಿ ದೇವಾಲಯ

ಸ್ವಾಮಿ ಬುಧಾ ಅಮರನಾಥಜಿ ದೇವಾಲಯ, ಪೂಂಚ್

1

ಪೂಂಚ್‌ನ ಇನ್ನೊಂದು ಜನಪ್ರಿಯ ತಾಣ ಬುಧಾ ಅಮರ್‌ನಾಥ್‌ ಜಿ ಮಂದಿರ. ಇದು ಹಿಂದು ದೇವರಾದ ಶಿವನಿಗೆ ಮೀಸಲಾದ ಮಂದಿರ. ಪೂಂಚ್‌ನಿಂದ 25 ಕಿ.ಮೀ. ದೂರದಲ್ಲಿದೆ. ಇದು ಪಿರ್‌ ಪಂಚಲಾ ಬೆಟ್ಟಗಳ ಶ್ರೇಣಿ ನಡುವೆ ಇದೆ. ಇಲ್ಲಿನ ದೇಗುಲ ಗಗ್ರಿ ತೊರೆ ಹಾಗೂ ಪಲುಸ್ತಾನದಿ ಸಂಗಮ ಪ್ರದೇಶದಲ್ಲಿದೆ.  

ಬೃಹತ್‌ ಬಂಡೆ ಮೇಲೆ ನಿಂತಿರುವ ಈ ದೇವಾಲಯಕ್ಕೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕಿಗೆ ತಲಾ ಒಂದೊಂದು ಬಾಗಿಲುಗಳು ಇರುವುದನ್ನು ಕಾಣಬಹುದು. ಹಿಂದುಗಳ ಎಲ್ಲಾ ನಾಲ್ಕು ವರ್ಣಗಳನ್ನು ಇದು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಬ್ರಾಹ್ಮಣ ಅಂದರೆ ವೈದಿಕ ವೃತ್ತಿ ನಡೆಸುವವರು, ಕ್ಷತ್ರಿಯ ಅಂದರೆ ಸೈನಿಕರು, ವೈಶ್ಯ ಅಂದರೆ ವ್ಯಾಪಾರಿಗಳು ಹಾಗೂ ಶೂದ್ರ ಅಂದರೆ ಸೇವಾಕರ್ಮಿಗಳು ಎಂಬುದಾಗಿದೆ. ಕಲ್ಲಿನ ಶಿವಲಿಂಗ ಇಲ್ಲಿನ ಪ್ರಮುಖ ಆಕರ್ಷಣೆ. ಇದರೊಂದಿಗೆ ಇಲ್ಲಿರುವ ಇನ್ನೂ ಅನೇಕ ದೇವರ ಮೂರ್ತಿಗಳು ಗಮನ ಸೆಳೆಯುತ್ತವೆ.

ದೇವಾಲಯದ ಪ್ರವೇಶಕ್ಕೆ ಮುನ್ನ ಭಕ್ತರು ಇಲ್ಲಿನ ತೊರೆಯಲ್ಲಿ ಸ್ನಾನ ಮಾಡುತ್ತಾರೆ. ಇದು ಇಲ್ಲಿ ಕಡ್ಡಾಯ. ಇಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮ ಸ್ವಾಮಿ ಬುಧಾ ಅಮರನಾಥಜಿ ಉತ್ಸವ. ಪ್ರತಿ ವರ್ಷ ಅದ್ದೂರಿಯಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಇದಲ್ಲದೇ ರಕ್ಷಾ ಬಂಧನ ಕೂಡ ಜನಪ್ರಿಯ ಹಿಂದು ಉತ್ಸವ ಆಚರಣೆಯಾಗಿದೆ. ದಶಮಿ ಅಖರ ಸಂದರ್ಭದಲ್ಲಿ ಹೋಮ, ಹವನಾದಿ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಇನ್ನು ಚೆಹ್ರಿ ಮುಬಾರಖ್‌ ಅಥವಾ ಹೋಲಿ ಆಚರಣೆಯೂ ಇಲ್ಲಾಗುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed