Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಹವಾಮಾನ

ಪೂಂಚ್ ಹವಾಮಾನ

ಅಕ್ಟೋಬರ್‌ ತಿಂಗಳಿಂದ ನವೆಂಬರ್‌ ನಡುವಿನ ಅವಧಿ ಇಲ್ಲಿಯ ಭೇಟಿಗೆ ಸಕಾಲ. ಬೇಸಿಗೆ ಸೂಕ್ತ. ಚಳಿಗಾಲದಲ್ಲಿ ಅಪಾರ ಚಳಿ ಇರುತ್ತದೆ. ಚಳಿಗಾಲದಲ್ಲಿ ಬಹುತೇಕ ಸಂದರ್ಭ ಹಿಮ ಸುರಿಯುತ್ತಿರುತ್ತದೆ. ಇದರಿಂದ ಭೇಟಿಗೆ ಬೇಸಿಗೆ ಉತ್ತಮವಾದುದು. ಹೋರಗೆ ಸುತ್ತಾಡಲು ಇದು ಪ್ರಶಸ್ತವಾಗಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌): ಬೇಸಿಗೆಯಲ್ಲಿ ಶುಷ್ಕ ಹವಾಮಾನ ಪೂಂಚ್‌ನಲ್ಲಿ ಇರುತ್ತದೆ. ಅತಿಹೆಚ್ಚು ತಾಪಮಾನ ಅಂದರೆ 32 ಡಿಗ್ರಿ ಸೆಲ್ಶಿಯಸ್‌ ಹಾಗೂ ಕಡಿಮೆ ತಾಪಮಾನ ಅಂದರೆ 10 ಡಿಗ್ರಿ ಸೆಲ್ಶಿಯಸ್‌ ದಾಖಲಾಗುತ್ತದೆ. ಪ್ರವಾಸಿಗರ ಭೇಟಿಗೆ ಇದು ಸಕಾಲ ಎಂದು ಸೂಚಿಸಲಾಗುತ್ತದೆ. ಕಾರಣ ವಾತಾವರಣ ಈ ಸಂದರ್ಭದಲ್ಲಿ ಸಹನೀಯವಾಗಿರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌): ಮಳೆಗಾಲದಲ್ಲಿ ಇಲ್ಲಿ ಭಾರೀ ಮಳೆ ಸುರಿಯುತ್ತದೆ. ಈ ಸಮಯದಲ್ಲಿ ವಾತಾವರಣ ಕೂಡ ಅಸಹನೀಯವಾಗಿರುತ್ತದೆ. ಒಟ್ಟಾರೆ ಪ್ರದೇಶದಲ್ಲಿ ಹಸಿರು ವ್ಯಾಪಕವಾಗಿ ಕಂಗೊಳಿಸುತ್ತಿರುತ್ತದೆ.

ಚಳಿಗಾಲ

(ಡಿಸೆಂಬರ್‌ನಿಂದ ಫೆಬ್ರವರಿ): ಪೂಂಚ್‌ ಸಾಮಾನ್ಯವಾಗಿ ಹೆಚ್ಚು ಚಳಿಯನ್ನು ಹೊಂದಿದ ತಾಣ. ಈ ಕಾಲದಲ್ಲಂತೂ ಚಳಿಯ ಪ್ರಭಾವ ಹೆಚ್ಚಿರುತ್ತದೆ. ಈ ಸಮಯದಲ್ಲಿ ಪ್ರದೇಶದಲ್ಲಿ ಹಿಮಕೂಡ ವ್ಯಾಪಕವಾಗಿ ಸುರಿಯುತ್ತದೆ.