Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಆಕರ್ಷಣೆಗಳು » ಶ್ರೀ ದಶಾನಮಿ ಅಕ್ಷರ ಮಂದಿರ

ಶ್ರೀ ದಶಾನಮಿ ಅಕ್ಷರ ಮಂದಿರ, ಪೂಂಚ್

1

ಜಿಲ್ಲೆಯ ಅತ್ಯಂತ ಪ್ರಸಿದ್ಧ ಹಾಗೂ ಜನಪ್ರಿಯ ಮಂದಿರಗಳಲ್ಲಿ ದಶಾನಮಿ ಅಕ್ಷರ ಮಂದಿರ ಕೂಡ ಒಂದು. 1760 ರಲ್ಲಿ ಅತ್ಯಂತ ಜನಪ್ರಿಯ ಧಾರ್ಮಿಕ ಗುರು ಸ್ವಾಮಿ ಜವಾಹರ ಗಿರಿ ಜೀ ಇಲ್ಲಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಪೂಂಚ್‌ನಲ್ಲಿ ರುಸ್ತುಂ ಖಾನ್‌ ಅಧಿಕಾರ ನಡೆಸುತ್ತಿದ್ದ. ಗುರುಗಳು ಇಲ್ಲಿಗೆ ಬಂದಾಗ ಅವರನ್ನು ಸತ್ಕರಿಸಿದ ರಾಜ ಅವರಿಗೆ ಇನ್ನಷ್ಟು ಜಮೀನನ್ನು ಕೊಡುಗೆಯಾಗಿ ನೀಡಿದ. ಇದೇ ಸ್ಥಳದಲ್ಲಿ ಸ್ವಾಮೀಜಿ ತಾವು ಸಮಾಧಿಗೆ ತೆರಳುವವರೆಗೂ ಇದ್ದರು.  1787ರಲ್ಲಿ ಇದೊಂದು ಧಾರ್ಮಿಕ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿತ್ತು. ದೇವಾಲಯದ ಸಮೀಪದಲ್ಲಿಯೇ ಸ್ವಾಮೀಜಿಯವರ ಸಮಾಧಿಯೂ ಇದ್ದು, ಭಕ್ತರು ಇದನ್ನೂ ದರ್ಶಿಸಿ ತೆರಳುತ್ತಾರೆ.

ನಂತರದ ವರ್ಷಗಳಲ್ಲಿ ಇಲ್ಲಿಗೆ ಸಾಕಷ್ಟು ಸಾದು ಸಂತರು ಆಗಮಿಸಿದರು. ಅವರಲ್ಲಿ ಅತ್ಯಂತ ಪ್ರಸಿದ್ಧ ಸಂಸ್ಕೃತ ಪಂಡಿತರಾದ ಸ್ವಾಮಿ ಶಮ್ಯಾನಂದಜೀ ಪ್ರಮುಖರು. ಇವರು ದೇವಾಲಯದ ಆವರಣದಲ್ಲೊಂದು ಸಂಸ್ಕೃತ ಶಾಲೆ ಆರಂಭಿಸಿದರು. ಸ್ವಾಮಿ ಶೌರ್ಯಾನಂದಜೀ, ಸ್ವಾಮಿ ಪರಮಾನಂದಜೀ, ಸ್ವಾಮಿ ಸತ್ಯಾನಂದ ಸರಸ್ವತಿ ಮತ್ತಿತರೆ ಧಾರ್ಮಿಕ ಗುರುಗಳು ಇಲ್ಲಿ ಬಂದು ನೆಲೆಸಿದ್ದರು.

ಈ ಸಂದರ್ಭದಲ್ಲಿ ದಶಾನಮಿ ಅಕ್ಷರ ಮಂದಿರದಲ್ಲಿ ಸ್ವಾಮಿ ಸತ್ಯಾನಂದಜೀ ಇದ್ದಾರೆ. ಉತ್ಸವಗಳಲ್ಲಿ ಪ್ರಮುಖವಾಗಿ ಚಾರಿ ಮುಬಾರಖ್‌ ಅಥವಾ ಹೋಲಿ ಹಬ್ಬವನ್ನು ಪ್ರತಿ ವರ್ಷ ಇಲ್ಲಿ ಅದ್ದೂರಿಯಾಗಿ ನೆರವೇರಿಸಲಾಗುತ್ತದೆ. ಇದಲ್ಲದೇ ರಕ್ಷಾ ಬಂಧನ ಆಚರಣೆಯೂ ನಡೆಯುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed