ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಸ್ಥಳ, ಅತ್ಯಾಕರ್ಷಕ ಜಲಪಾತವನ್ನು ಒಳಗೊಂಡ ಸುಂದರ ತಾಣ ನೂರಿ ಚಂಬ್. ಪೂಂಚ್‌ನಿಂದ ಇದು 45 ಕಿ.ಮೀ. ದೂರದಲ್ಲಿದೆ. ಮೊಘಲ್ ಅರಸು ಜಹಾಂಗೀರ್ ನಿಂದಾಗಿ ಇದು ಜನಪ್ರಿಯತೆ ಸಾಧಿಸಿದೆ. ತನ್ನ ಪ್ರೀತಿಯ ಪತ್ನಿ ನೂರ್ ಜಹಾನ್‌ಗಾಗಿ ಜಹಾಂಗೀರ್ ಈ ತಾಣವನ್ನು ಅಭಿವೃದ್ಧಿ ಪಡಿಸಿದ್ದ ಹಾಗೂ ಅವಳ ಹೆಸರನ್ನೇ ಇರಿಸಿದ್ದ ಕೂಡ. ಕಾಶ್ಮೀರಕ್ಕೆ ತೆರಳುವ ಮಾರ್ಗದಲ್ಲಿ ರಾಣಿಯು ಇಲ್ಲಿ ಕೆಲ ಕಾಲ ವಿಶ್ರಮಿಸಿದ್ದಳು. ಇಲ್ಲಿನ ಜಲಪಾತದಲ್ಲಿಯೇ ಸ್ನಾನವನ್ನೂ ಮಾಡಿದ್ದಳು. ಜಲಪಾತಕ್ಕೆ ಸಮೀಪವೇ ಆಕೆಯು ಒಂದು ಕನ್ನಡಿಯನ್ನೂ ಅಳವಡಿಸಿಕೊಂಡಿದ್ದಳು. ಅದು ಇಂದಿಗೂ ಪ್ರವಾಸಿಗರಿಗೆ ಕಾಣಸಿಗುತ್ತದೆ.


Click it and Unblock the Notifications