ಲೋರನ್ ಒಂದು ಚಿಕ್ಕ ಪ್ರದೇಶ. ಪೂಂಚ್‌ನಿಂದ 35 ಕಿ.ಮೀ. ದೂರದಲ್ಲಿದೆ. ಈ ಸುಂದರ ಹಳ್ಳಿ ಪೀರ್ ಪಂಜಲಾ ಪರ್ವತ ಶ್ರೇಣಿಯ ಬುಡದಲ್ಲಿದೆ. ಬೆಟ್ಟಗಳು ಮತ್ತು ಜಲಧಾರೆಗಳಿಂದಾಗಿ ಈ ತಾಣ ಇನ್ನಷ್ಟು ಆಕರ್ಷಣೀಯವಾಗಿದೆ. 1542 ರಿಂದ ಪೂಂಚ್‌ನ ರಾಜಧಾನಿಯಾಗಿ ಲೋರನ್ ಕಾರ್ಯನಿರ್ವಹಿಸುತ್ತಿದೆ. ಹಿಂದು ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಇದು ಲೋರನ್ ಕೋಟೆ ಅಂತಲೇ ಜನಪ್ರಿಯವಾಗಿತ್ತು. ಇಲ್ಲೊಂದು ಹಳೆಯ ಕೋಟೆ ಇದ್ದು ಇದನ್ನು ಜನ ಲೋಹಾರ್ ಕೋಟೆ ಅಂತಲೇ ಕರೆಯುತ್ತಾರೆ. ಒಂದು ಕಾಲದಲ್ಲಿ ಇದು ಕಾಶ್ಮೀರದ ಪ್ರವೇಶದ್ವಾರವಾಗಿ ಜನಪ್ರಿಯತೆ ಸಾಧಿಸಿತ್ತು.


Click it and Unblock the Notifications