ಪ್ರಸಿದ್ಧ ರಜಪೂತ್ ಮುಖ್ಯಸ್ಥನಾಗಿದ್ದ ಜಸ್ಪಾಲ್ ಸಿಂಗ್ ಪಠಾನಿಯಾನಿಂದ ಈ ಕೋಟೆಯು 1505 ರಲ್ಲಿ ನಿರ್ಮಿತವಾಗಿದೆ. ನುರ್ಪುರ್ ಹಾಗು ಕಂಗ್ರಾ ಪ್ರದೇಶಗಳನ್ನು ನಿಯಂತ್ರಿಸುವ ಮೂಲ ಉದ್ದೇಶಕ್ಕಾಗಿ ಇದು ನಿರ್ಮಾಣವಾಯಿತು. ಈ ಕೋಟೆ ಸಂಕೀರ್ಣದಲ್ಲಿ ಹಲವು ಸುಂದರ ದೇವಾಲಯಗಳು ಹಾಗು ಮಸೀದಿಗಳಿದ್ದು ಅಂದಿನ ಆಡಳಿತಗಾರರ ಜಾತ್ಯತೀತ ಮನೋಭಾವನೆಯನ್ನು ಎತ್ತಿ ತೋರುತ್ತದೆ. ಈ ಕೋಟೆಯ ಮೇಲಿನಿಂದ ಕಾಣುವ ದೃಶ್ಯವು ರುದ್ರರಮಣೀಯವಾಗಿದ್ದು, ಹರಿಯುವ ರಾವಿ ನದಿ ಹಾಗು ಹಿಮಾಲಯದ ನೋಟವು ಅದ್ಭುತವಾಗಿ ಗೋಚರಿಸುತ್ತದೆ.


Click it and Unblock the Notifications