ಪೌಂಟಾ ಸಾಹಿಬ್ನಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿರುವ ಅಸ್ಸಾನ್ ಸರೋವರ ಇಲ್ಲಿಯ ಪ್ರಮುಖ ಆಕರ್ಷಣೆಗಳ ಪೈಕಿ ಒಂದು. ಹಿಮಾಚಲ ಪ್ರದೇಶದ ಪ್ರವಾಸೀ ಹಾಟ್ಸ್ಪಾಟ್ಗಳಲ್ಲಿ ಮುಖ್ಯವಾಗಿ ಗುರುತಿಸಿಕೊಂಡಿರುವ ಈ ಪ್ರದೇಶ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಈ ಸರೋವರವನ್ನು ಅಭಿವೃದ್ಧಿಪಡಿಸಿ, ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದೆ. ವಿವಿಧ ಬಗೆಯ ದೋಣಿವಿಹಾರಕ್ಕೆ ಇಲ್ಲಿ ಅವಕಾಶವಿದೆ. ಮುಖ್ಯವಾಗಿ ಪೆಡಲ್ಬೋಟಿಂಗ್, ಸೈಲ್ ಬೋಟಿಂಗ್, ರೋವಿಂಗ್, ವೇಗದ ರಾಫ್ಟಿಂಗ್ ಪ್ರವಾಸಿಗರ ಮನಸಿಗೆ ಖುಷಿ ನೀಡುತ್ತವೆ. ವಾಟರ್ ಸ್ಕೀಯಿಂಗ್ ಮತ್ತು ಇಲ್ಲಿ ಹೋವರ್ಕ್ರಾಫ್ಟ್ ಸವಾರಿಯಂಥ ಸಾಹಸ ಜಲಕ್ರೀಡೆಗಳನ್ನೂ ನೋಡಬಹುದಾಗಿದ್ದು, ಮನಸು ರೋಮಾಂಚಿತವಾಗುತ್ತದೆ.


Click it and Unblock the Notifications