ದೀಯ್ ಕಾ ಮಂದಿರವನ್ನು ಸಿರ್ಮೌರ್ ನ ಹಿಂದಿನ ರಾಜನ ಸಹೋದರಿ ನಿರ್ಮಿಸಿದಳು ಎಂದು ನಂಬಲಾಗಿದ್ದು ಈ ಪುರಾತನ ದೇವಾಲಯ ಪೌಂಟಾ ಸಾಹಿಬ್ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಹಿಂದೂ ದೇವತೆ ಶ್ರೀ ರಾಮನನ್ನು ಪೂಜಿಸಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ರಾಮ, ವಿಷ್ಣುವಿನ ಏಳನೇ ಅವತಾರ, ಜನರ ಸಂರಕ್ಷಣೆಯನ್ನು ಮಾಡುವ ಸಲುವಾಗಿ ಅವತಾರವೆತ್ತಿದ್ದ ಎಂದು ನಂಬಲಾಗುತ್ತದೆ.