Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು » ಹೇಮುರವರ ಸಮಾಧಿ ಸ್ಥಳ

ಹೇಮುರವರ ಸಮಾಧಿ ಸ್ಥಳ, ಪಾಣಿಪತ್

1

ಹೇಮ್ ಚಂದರ್ ಅಥವಾ ಹೇಮು ಎಂದೆ ಪ್ರಸಿದ್ಧರಾಗಿದ್ದ ಹರಿಯಾಣದ ರೆವಾರಿಯ ರಾಜ್ಯಪಾಲರು, ಮುಂದೆ ತಮ್ಮ ಬುದ್ಧಿಮತ್ತೆ, ಶೌರ್ಯ ಮತ್ತು ಸಾಮರ್ಥ್ಯಗಳಿಂದ ಸಾಮ್ರಾಟ್ ಹೇಮ್ ಚಂದರ್ ವಿಕ್ರಮಾದಿತ್ಯ ಎಂಬ ಬಿರುದನ್ನು ಸಂಪಾದಿಸಿಕೊಂಡರು.

ಇವರು ಉತ್ತರ ಭಾರತದಾದ್ಯಂತ ಯುದ್ಧವನ್ನು ಮಾಡಿ ದೆಹಲಿಯನ್ನು ಮುತ್ತಿಗೆ ಹಾಕಬೇಕೆಂದು ಬಯಸಿದರು. ಇವರ ಗುರಿ ಅಕ್ಬರನನನ್ನು ದೇಶದಿಂದ ಓಡಿಸಿ, ಭಾರತದಲ್ಲಿ ಮರಳಿ ಹಿಂದೂ ಆಡಳಿತವನ್ನು ಮರು ಸ್ಥಾಪಿಸಬೇಕೆಂಬುದಾಗಿತ್ತು.

ಇವರು ಪಾಣಿಪತ್‍ನಲ್ಲಿ ನಡೆದ ಎರಡನೆ ಯುದ್ಧದಲ್ಲಿ ಇನ್ನೇನು ಗೆಲ್ಲಬೇಕು ಎಂಬ ಸಮಯದಲ್ಲಿ ಕಣ್ಣಿಗೆ ಬಡಿದ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಆಗ ದುರದೃಷ್ಟವಶಾತ್ ಯುದ್ಧದ ಗೆಲುವು ನಾಟಕೀಯವಾಗಿ ಎದುರಾಳಿಗಳ ಪರವಾಗಿ ಹೋಯಿತು. ಕಣ್ಣಿಗೆ ಉಂಟಾದ ತೀವ್ರವಾದ ಗಾಯದಿಂದ ಪ್ರಙ್ಞಾಶೂನ್ಯನಾದ ಹೇಮುವನ್ನು ಬಂಧಿಸಿ, ಪಾಣಿಪತ್‍ನ  ಜಿಂದ್ ರಸ್ತೆಯಲ್ಲಿದ್ದ ಸೌಂದಪುರದ ಅಕ್ಬರನ ಬಿಡಾರಕ್ಕೆ ತರಲಾಯಿತು. ಅಲ್ಲಿ ಹೇಮು ತನ್ನ ಕೊನೆಯುಸಿರೆಳೆದನು.

ಆದರೆ ಕ್ರೋದೋನ್ಮದನಾದ ಅಕ್ಬರ್ ಹೇಮುವಿನ ರುಂಡ ಮುಂಡಗಳನ್ನು ಬೇರ್ಪಡಿಸಿದನು. ಅಲ್ಲದೆ ಹೇಮುವಿನ ರುಂಡವನ್ನು ಕಾಬೂಲ್‍ಗೆ ಕಳುಹಿಸಿ, ಅಲ್ಲಿನ ದೆಹಲಿ ದರ್ವಾಜಾಗೆ ತೂಗು ಹಾಕಲು ಸೂಚಿಸಿದನು ಮತ್ತು ರುಂಡವನ್ನು ದೆಹಲಿಯಲ್ಲಿರುವ ಪುರಾನ ಕಿಲ್ಲಾಗೆ ತೂಗು ಹಾಕಲು ಸೂಚಿಸಿದನು. ಇದರ ಉದ್ದೇಶ ಹಿಂದೂಗಳಿಗೆ ಮೊಘಲರ ವಿರುದ್ಧ ತಿರುಗಿ ಬಿದ್ದರೆ ಏನಾಗುತ್ತದೆ ಎಂಬ ಸಂದೇಶವನ್ನು ಸಾರುವುದಾಗಿತ್ತು. ಮುಂದೆ ಹೇಮುವಿನ ಸ್ನೇಹಿತರು ಮತ್ತು ಆತನ ಅನುಯಾಯಿಗಳು ಹೇಮುವಿನ ತಲೆಯನ್ನು ಕಡಿದ ಸ್ಥಳದಲ್ಲಿ ಆತನ ಸಮಾಧಿಯನ್ನು ನಿರ್ಮಿಸಲು ಪ್ರೇರೇಪಣೆ ನೀಡಿತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed