Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು » ಸಲಾರ್ ಜಂಗ್ ದ್ವಾರ

ಸಲಾರ್ ಜಂಗ್ ದ್ವಾರ, ಪಾಣಿಪತ್

1

ಹೆಸರೇ ಸೂಚಿಸುವಂತೆ ಇದು ಹೈದರಾಬಾದಿನ ನಿಜಾಮರ ಪ್ರಧಾನಮಂತ್ರಿಯಾಗಿದ್ದ ಸಲಾರ್ ಜಂಗ್‍ನ ಸ್ಮಾರಕವಾಗಿ ನಿರ್ಮಾಣಗೊಂಡ ದ್ವಾರವಾಗಿದೆ.

ಹೈದರಾಬಾದಿನ ನಿಜಾಮನು ಬ್ರಿಟೀಷರ ಕಟ್ಟಾ ಬೆಂಬಲಿಗನಾಗಿದ್ದನು, ಹಾಗಾಗಿ ಈತನು ಸಹ ತನ್ನ ನಿಜಾಮನನ್ನೆ ಅನುಸರಿಸಿದನು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಬ್ರಿಟೀಷ್ ಸರ್ಕಾರದ ಮೇಲೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಬಹಿರಂಗವಾಗಿ ಸಮರ ಸಾರಿದಾಗ, ಈತನು ಸ್ವಾತಂತ್ರ್ಯ ಹೋರಾಟಗಾರರು ಹೈದರಾಬಾದಿನ ತನ್ನ ನಿವಾಸದ ಮೇಲೆ ದಾಳಿ ಮಾಡುವ ಯೋಜನೆಯನ್ನು ತಿಳಿದುಕೊಂಡು ತನ್ನ ಯಜಮಾನರಿಗೆ ತಿಳಿಸಿದನು. ಹಾಗಾಗಿ ಅವರು ಈತನಿಗೆ ಸಮಯಕ್ಕೆ ಸರಿಯಾಗಿ ಸಹಾಯ ಮಾಡಲು ನೆರವಾಗಿದ್ದಲ್ಲದೆ, ಸ್ವಾತಂತ್ರ್ಯ ಹೋರಾಟಗಾರರನ್ನು ಸೋಲಿಸಲು ಸಹ ಸುಲಭವಾಯಿತು.

ನಂತರ ಈತನಿಗೆ ಸರ್ ಎಂಬ ಗೌರವವನ್ನು ಮತ್ತು ಸಲಾರ್ ಜಂಗ್ ಬಿರುದನ್ನು ಸಹ ನೀಡಲಾಯಿತು. ನಂತರ ಈತನನ್ನು ಅಧಿಕೃತವಾಗಿ ಸಲಾರ್ ಜಂಗ್ ಎಂದು ಕರೆಯಲಾಯಿತು. ಆದರೆ ಸಾಮಾನ್ಯ ಜನರು ಈತನನ್ನು ನವಾಬ್ ಸಾಹಿಬ್ ಎಂದು ಕರೆಯುತ್ತಿದ್ದರು.

ಸಲಾರ್ ಜಂಗ್ ದ್ವಾರವನ್ನು ಸ್ನೇಹಿತ ಮತ್ತು ಅಭಿಮಾನಿಯಾದ ಫೈಜ್ ನವಾಬ್ ಸಾದಕ್ ನಿರ್ಮಿಸಿದನು. ಇದನ್ನು ಪಾಣಿಪತ್‍ ನಗರದ ಹೃದಯಭಾಗದಲ್ಲಿರುವ ಮೈನ್ ಅರ್ಟೆರಿಯಲ್ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue