Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಹವಾಮಾನ

ಪಾಣಿಪತ್ ಹವಾಮಾನ

ಪಾಣಿಪತ್‍ನಲ್ಲಿ ಸಮಶೀತೋಷ್ಣವಲಯದ ಹವಾಮಾನವನ್ನು ನಾವು ನೋಡಬಹುದು. ಇಲ್ಲಿ ಬೇಸಿಗೆ ಕಾಲ, ಚಳಿಗಾಲ ಮತ್ತು ಮಳೆಗಾಲಗಳೆಂಬ ಮೂರು ಕಾಲಗಳನ್ನು ನಾವು ಕಾಣಬಹುದು. ಬೇಸಿಗೆಗಳು ಇಲ್ಲಿ ವಿಪರೀತವಾದ ಬಿಸಿಲಿನಿಂದ ಕೂಡಿದ್ದರೆ, ಚಳಿಗಾಲವು ವಿಪರೀತವಾದ ಚಳಿಯಿಂದ ಕೂಡಿರುತ್ತವೆ. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ, ಏಕೆಂದರೆ ಆಗ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯು ಇಲ್ಲಿ ಒಣ ಹವೆಯಿಂದ ಕೂಡಿದ್ದು, ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 45° ಸೆಲ್ಶಿಯಸ್ ಇರುತ್ತದೆ. ಜೊತೆಗೆ ಇಲ್ಲಿನ ಕನಿಷ್ಠ ಉಷ್ಣಾಂಶವು 35° ಸೆಲ್ಶಿಯಸ್ ಇರುತ್ತದೆ. ಬೇಸಿಗೆ ಕಾಲವು ಇಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿರುತ್ತದೆ.

ಮಳೆಗಾಲ

ಪಾಣಿಪತ್‍ನಲ್ಲಿ ಜುಲೈ,ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮಿತವಾದ ಮಳೆ ಬೀಳುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ತಕ್ಕಮಟ್ಟಿಗೆ ಕಡಿಮೆಯಿರುತ್ತದೆ.

ಚಳಿಗಾಲ

ಚಳಿಗಾಲವು ಪಾಣಿಪತ್‍ನಲ್ಲಿ ಅತ್ಯಂತ ಚಳಿಯಿಂದ ಕೂಡಿರುತ್ತದೆ. ಆದರೂ ಈ ಅವಧಿಯಲ್ಲಿ ಒಣ ಹವೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 17° ಸೆಲ್ಶಿಯಸ್‍ನಿಂದ ಕನಿಷ್ಠ 4° ಸೆಲ್ಶಿಯಸ್‍ವರೆಗೆ ಇರುತ್ತದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಇಲ್ಲಿ ಚಳಿಗಾಲವಿರುತ್ತದೆ.