World Tourism Day 2024: ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಇದನ್ನು ಆಚರಿಸುವ ಉದ್ದೇಶವು ಪ್ರವಾಸೋದ್ಯಮದ ಮಹತ್ವ ಮತ್ತು ಅದರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸುವುದು. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) ಪ್ರಪಂಚದಾದ್ಯಂತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ನಡುವೆ ಪರಸ್ಪರ ತಿಳುವಳಿಕೆ ಮತ್ತು ಸಹಕಾರವನ್ನು ಉತ್ತೇಜಿಸಲು 1980 ರಲ್ಲಿ ಈ ದಿನವನ್ನು ಪ್ರಾರಂಭಿಸಿತು.
ಪ್ರಪಂಚದಲ್ಲಿ ನೂರಾರು ವಿಶ್ವ ಪರಂಪರೆಯ ತಾಣಗಳು, ಐತಿಹಾಸಿಕ ಕಟ್ಟಡಗಳು, ಅರಮನೆಗಳು ಮತ್ತು ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಅನೇಕ ಸ್ಥಳಗಳಿವೆ. ಭಾರತವು ಸಹ ತನ್ನ ಸಾಂಸ್ಕೃತಿಕ ವೈವಿಧ್ಯತೆ, ಐತಿಹಾಸಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾದ ದೇಶವಾಗಿದೆ. ಇಲ್ಲಿನ ಹಲವು ಸ್ಥಳಗಳು ವಿಶೇಷವಾಗಿ ವಿದೇಶಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ. ಹೌದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತದಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಇವು ಭಾರತೀಯ ಪ್ರವಾಸಿಗರಿಗೆ ಮಾತ್ರವಲ್ಲದೆ, ವಿದೇಶಿ ಪ್ರಯಾಣಿಕರಿಗೂ ಬಹಳ ಇಷ್ಟ. ವಿಶ್ವ ಪ್ರವಾಸೋದ್ಯಮ ದಿನದ ಈ ಸಂದರ್ಭದಲ್ಲಿ, ವಿದೇಶಿ ಪ್ರವಾಸಿಗರ ನೆಚ್ಚಿನ ಭಾರತೀಯ ಸ್ಥಳಗಳ ಬಗ್ಗೆ ತಿಳಿಯಿರಿ...ಇಲ್ಲಿ ಪ್ರತಿ ವರ್ಷ ವಿದೇಶಿ ಪ್ರವಾಸಿಗರ ಜನಸಂದಣಿಯೂ ಕಂಡುಬರುತ್ತದೆ.

ದೆಹಲಿ
ದೇಶದ ರಾಜಧಾನಿ ದೆಹಲಿಗೆ ಅತಿ ಹೆಚ್ಚು ವಿದೇಶಿ ಅತಿಥಿಗಳು ಬರುತ್ತಾರೆ. ದೆಹಲಿಯು ಹುಮಾಯೂನ್ ಸಮಾಧಿ, ಕುತುಬ್ ಮಿನಾರ್, ಇಂಡಿಯಾ ಗೇಟ್ ಮುಂತಾದ ಅನೇಕ ಐತಿಹಾಸಿಕ ಕಟ್ಟಡಗಳನ್ನು ಹೊಂದಿದ್ದು, ಇವುಗಳು ವಿಶ್ವವಿಖ್ಯಾತವಾಗಿವೆ. ಭವ್ಯವಾದ ಚಾಂದಿನಿ ಚೌಕ್ ಮಾರುಕಟ್ಟೆ ಮತ್ತು ಕನ್ನಾಟ್ ಪ್ಲೇಸ್ ಸಹ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಒಂದು ವರದಿಯ ಪ್ರಕಾರ, 2021 ರಲ್ಲಿ ದೆಹಲಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಲಾಯಿತು. ಕೋವಿಡ್ ಅವಧಿಯ ನಂತರ, 2023 ರಲ್ಲಿ 18 ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ದೆಹಲಿಗೆ ಬಂದರು.
ಆಗ್ರಾ
ವಿಶ್ವದ ಏಳನೇ ಅದ್ಭುತ ಭಾರತದ ಆಗ್ರಾದಲ್ಲಿದೆ. ಇಲ್ಲಿರುವ ತಾಜ್ ಮಹಲ್, ಭಾರತ ಮಾತ್ರವಲ್ಲದೆ ವಿಶ್ವದ ಅತಿ ದೊಡ್ಡ ಆಕರ್ಷಕ ಸ್ಥಳಗಳಲ್ಲಿ ಒಂದಾಗಿದೆ. ತಾಜ್ ಮಹಲ್ ಅನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತದ ವಿವಿಧ ನಗರಗಳಿಂದ ಮತ್ತು ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ತಾಜ್ ಅನ್ನು ನೋಡಲು ಆಗ್ರಾಗೆ ತೆರಳುತ್ತಾರೆ. ಆಗ್ರಾದಲ್ಲಿ ತಾಜ್‌ಮಹಲ್‌ನ ಹೊರತಾಗಿ, ಆಗ್ರಾ ಕೋಟೆಯು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿಯೂ ವಿದೇಶಿ ಪ್ರವಾಸಿಗರು ತಿರುಗಾಡುವುದನ್ನು ಕಾಣಬಹುದು. 2019 ರಲ್ಲಿ ಸುಮಾರು 80 ಲಕ್ಷ ವಿದೇಶಿ ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡಿದ್ದರು. ಆದರೆ 2023 ರಲ್ಲಿ 11 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡಿದ್ದರು.

ಜೈಪುರ
ತನ್ನ ಐತಿಹಾಸಿಕ ಕೋಟೆಗಳಾದ ಅಂಬರ್ ಕೋಟೆ, ಹವಾ ಮಹಲ್, ಅಜ್ಮೀರ್ ಕೋಟೆ ಮತ್ತು ಸಿಟಿ ಪ್ಯಾಲೇಸ್‌ಗಳಿಗೆ ಜೈಪುರ ಹೆಸರುವಾಸಿಯಾಗಿದೆ. ಇಲ್ಲಿನ ವರ್ಣರಂಜಿತ ಮಾರುಕಟ್ಟೆ ಮತ್ತು ಸ್ಥಳೀಯ ಕಲೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜೈಪುರದ ರಾಜಮನೆತನದ ಆತಿಥ್ಯ ಮತ್ತು ವೈಭವವನ್ನು ನೋಡಲು ವಿದೇಶಿ ಪ್ರವಾಸಿಗರು ಪ್ರಪಂಚದಾದ್ಯಂತ ಇಲ್ಲಿಗೆ ಬರುತ್ತಾರೆ.

ವಾರಣಾಸಿ
ಉತ್ತರ ಪ್ರದೇಶದ ಗಂಗಾ ನದಿಯ ದಡದಲ್ಲಿರುವ ಬನಾರಸ್ ನಗರವನ್ನು ಭಾರತೀಯ ಸಂಸ್ಕೃತಿಯ ಕೇಂದ್ರವೆಂದು ಪರಿಗಣಿಸಲಾಗಿದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯವೂ ಇಲ್ಲೇ ಇದೆ. ಇಲ್ಲಿ ದಶ್ವಶ್ಮೇಧ ಘಾಟ್‌ನಿಂದ ಮಣಿಕರ್ಣಿಕಾ ಘಾಟ್‌ವರೆಗೆ ಎಂಬತ್ತು ಘಾಟ್‌ಗಳಿವೆ. ಇಲ್ಲಿನ ಗಂಗಾ ಆರತಿಗೆ ಪ್ರತಿದಿನ ಸಾವಿರಾರು ವಿದೇಶಿ ಪ್ರವಾಸಿಗರು ಸೇರುತ್ತಾರೆ.
ಗೋವಾ
ಸುಂದರವಾದ ಕಡಲತೀರಗಳು, ರಾತ್ರಿಜೀವನ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾದ ಗೋವಾ ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಪ್ರಮುಖ ತಾಣವಾಗಿದೆ . ಭಾರತದ ಗೋವಾ ನಗರವು ವಿಶಿಷ್ಟ ಸ್ಥಳಗಳಿಂದ ತುಂಬಿದೆ. ಇಲ್ಲಿ ಐತಿಹಾಸಿಕ ತಾಣಗಳು, ಚರ್ಚ್ ಗಳ ಜೊತೆಗೆ ವಿದೇಶಗಳಂತಹ ಬೀಚ್ ಗಳೂ ಇವೆ. ಇದಲ್ಲದೇ ಸಾಕಷ್ಟು ವಿದೇಶಿ ಪ್ರವಾಸಿಗರೂ ಇಲ್ಲಿ ಕಾಣಸಿಗುತ್ತಾರೆ. 2021ರಲ್ಲಿ 22 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಗೋವಾಕ್ಕೆ ಬಂದಿದ್ದರೆ, 2023ರಲ್ಲಿ ಈ ಸಂಖ್ಯೆ ನಾಲ್ಕೂವರೆ ಲಕ್ಷಕ್ಕೂ ಹೆಚ್ಚಿದೆ.


Click it and Unblock the Notifications


















