Search
  • Follow NativePlanet
Share
» »ಸಾಯಿಬಾಬಾ ಭಕ್ತರಿಗೆ ಶುಭ ಸುದ್ದಿ… ಕಡಿಮೆ ಬಜೆಟ್‌ನಲ್ಲಿ ಶಿರಡಿ ಸಾಯಿಬಾಬಾ ದರ್ಶನ ಮಾಡಿ

ಸಾಯಿಬಾಬಾ ಭಕ್ತರಿಗೆ ಶುಭ ಸುದ್ದಿ… ಕಡಿಮೆ ಬಜೆಟ್‌ನಲ್ಲಿ ಶಿರಡಿ ಸಾಯಿಬಾಬಾ ದರ್ಶನ ಮಾಡಿ

ಪ್ರತಿ ವರ್ಷ ಸಾಯಿಬಾಬಾ ದರ್ಶನ ಪಡೆಯಲು ಪ್ರಪಂಚದಾದ್ಯಂತ ಅನೇಕ ಜನರು ಶಿರಡಿಗೆ ಬರುತ್ತಾರೆ. ಶಿರಡಿ ಮಹಾರಾಷ್ಟ್ರ ರಾಜ್ಯದಲ್ಲಿರುವ ಒಂದು ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಸಾಯಿಬಾಬಾ ಪವಾಡಗಳಿಗೆ ಸಂಬಂಧಿಸಿದ ಅನೇಕ ಕಥೆಗಳನ್ನು ನಾವು ಕೇಳಬಹುದು. ಬಾಬಾ ಜನರಲ್ಲಿದ್ದ ಅನೇಕ ರೋಗಗಳನ್ನು ಗುಣಪಡಿಸಿದರು ಮತ್ತು ದಾರಿ ತಪ್ಪಿದವರಿಗೆ ಸರಿಯಾದ ಮಾರ್ಗವನ್ನು ತೋರಿಸಿದರು ಎಂದು ಹೇಳಲಾಗುತ್ತದೆ. ಆದ್ದರಿಂದ ಅವರಿಗೆ ಕೃತಜ್ಞತೆ ಸಲ್ಲಿಸಲು ಪ್ರತಿ ವರ್ಷ ಲಕ್ಷಗಟ್ಟಲೆ ಜನರು ಶಿರಡಿಗೆ ಬರುತ್ತಾರೆ. ಈಗ ನೀವೂ ಶಿರಡಿಗೆ ಹೋಗುವ ಯೋಚನೆಯಲ್ಲಿದ್ದರೆ, ಅದೂ ಒಂದು ದಿನದ ಮಟ್ಟಿಗೆ, ಇಲ್ಲಿ ನಾವು ನಿಮಗೆ ಕೆಲವು ಯೋಜನೆಯನ್ನು ಹೇಳಲಿದ್ದೇವೆ. ನೀವು ಇದರಲ್ಲಿ ನಿಮಗೆ ಬೇಕಾದ ಯೋಜನೆಯನ್ನು ಅನುಸರಿಸಿದರೆ, ನಿಮ್ಮ ಶಿರಡಿ ಪ್ರವಾಸವು ಕಡಿಮೆ ಹಣದಲ್ಲಿ ಪೂರ್ಣಗೊಳ್ಳುತ್ತದೆ.

ನಿಮೆಗೆಲ್ಲರಿಗೂ ಗೊತ್ತಿರುವ ಹಾಗೆ ಶಿರಡಿಯ ಸಾಯಿಬಾಬಾ ದೇವಸ್ಥಾನವು ಬಹಳ ಜನಪ್ರಿಯತೆ ಪಡೆದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ನೀವು ಅಲ್ಲಿಗೆ ಕಡಿಮೆ ಖರ್ಚಿನಲ್ಲಿ ಹೋಗಲು ಉತ್ತಮ ಪ್ಯಾಕೇಜ್‌ಗಾಗಿ ಹುಡುಕುತ್ತಿದ್ದರೆ, ಐಆರ್‌ಸಿಟಿಸಿ ಶಿರಡಿಗಾಗಿ ವಿಶೇಷ ಪ್ಯಾಕೇಜ್‌ಗಳನ್ನು ಮಾಡಿದೆ. ಅದೇನೆಂದು ಬನ್ನಿ ಇಲ್ಲಿ ತಿಳಿಯೋಣ..

ಪ್ಯಾಕೇಜ್-ನಿಲ್ದಾಣಗಳ ವಿವರ

ಐಆರ್‌ಸಿಟಿಸಿ ಶಿರಡಿಗೆ ಒಂದು, ಎರಡು, ಮೂರು ದಿನಗಳ ವಿಶೇಷ ಪ್ಯಾಕೇಜ್ ಮಾಡಿದೆ. ಈ ಪ್ಯಾಕೇಜ್‌ನ ಬೆಲೆಯು ನೀವು ಆಯ್ಕೆ ಮಾಡುವ ಆಯ್ಕೆಯನ್ನು ಅವಲಂಬಿಸಿದೆ. ಅಂದರೆ ಪ್ಯಾಕೇಜ್ 4590 ರೂ.ನಿಂದ 9490 ರೂ. ನಡುವೆ ಇರುತ್ತದೆ. ಈ ಪ್ರಯಾಣವು ಪ್ರತಿ ಮಂಗಳವಾರದಂದು ಸಾಗಲಿದೆ. ಕಳೆದ ಏಪ್ರಿಲ್ 29 ರಿಂದ ಇದು ಪ್ರಾರಂಭವಾಯಿತು. ವಿಜಯವಾಡದಿಂದ ರೈಲು ಪ್ರಯಾಣ ಆರಂಭವಾಗಲಿದೆ. ದಾರಿಯಲ್ಲಿ ಖಮ್ಮಂ, ವಾರಂಗಲ್ ಮತ್ತು ಸಿಕಂದರಾಬಾದ್‌ನಂತಹ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಇದರರ್ಥ ನೀವು ಈ ಯಾವುದೇ ನಿಲ್ದಾಣದಿಂದ ರೈಲನ್ನು ಹಿಡಿಯಬಹುದು. ಈ ಪ್ಯಾಕೇಜ್ ನಿಮಗೆ ಶಿರಡಿಗೆ ಸುಲಭವಾಗಿ ಮತ್ತು ಅನುಕೂಲಕರವಾಗಿ ಪ್ರಯಾಣಿಸಲು ಸಹಾಯ ಮಾಡುತ್ತದೆ.

budgettourpackagetoshirdi

ಸಾಯಿ ಶಿವಂ ಪ್ಯಾಕೇಜ್

ಮೊದಲನೆಯದು ಸಾಯಿ ಶಿವಂ ಪ್ಯಾಕೇಜ್ ಉತ್ತಮ ಪ್ರಯಾಣವಾಗಿದೆ. ಇದು ನಾಲ್ಕು ದಿನಗಳವರೆಗೆ ಇರುತ್ತದೆ. ನೀವು ಮೂರು ರಾತ್ರಿ ಮನೆಯಿಂದ ಹೊರಗಿರಬೇಕಾಗುತ್ತದೆ. ಈ ಪ್ರಯಾಣದಲ್ಲಿ ನೀವು ಮೂರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತೀರಿ - ಶಿರಡಿ, ನಾಸಿಕ್ ಮತ್ತು ತ್ರಯಂಬಕೇಶ್ವರ. ಅಲ್ಲಿ ನೀವು ದೇವಾಲಯವನ್ನು ನೋಡುತ್ತೀರಿ ಮತ್ತು ಪೂಜೆ ಮಾಡಬಹುದು. ರಾತ್ರಿ ಹೊಟೇಲ್ ನಲ್ಲಿ ತಂಗುತ್ತೀರಿ. ನೀವು ಎರಡು ರಾತ್ರಿ ಹೋಟೆಲ್‌ನಲ್ಲಿ ಉಳಿಯಬಹುದು. ದೇವರ ದರ್ಶನ ಬಯಸುವವರಿಗೆ ಈ ಯಾತ್ರೆ ಉತ್ತಮ.

ಸಾಯಿ ಸನ್ನಿಧಿ ಎಕ್ಸ್-ತಿರುಪತಿ ಪ್ಯಾಕೇಜ್

ಇನ್ನು ಸಾಯಿ ಸನ್ನಿಧಿ ಎಕ್ಸ್-ತಿರುಪತಿ ಪ್ಯಾಕೇಜ್ ಒಂದು ಸಣ್ಣ ಪ್ರವಾಸವಾಗಿದೆ. ಇದರಲ್ಲಿ ನೀವು ಎರಡು ಸ್ಥಳಗಳಿಗೆ ಹೋಗುತ್ತೀರಿ. ಶಿರಡಿ ಮತ್ತು ಶನಿ ಶಿಂಗನಾಪುರ. ಶಿರಡಿಯಲ್ಲಿ ಸಾಯಿಬಾಬಾರವರ ದೇವಸ್ಥಾನವಿದೆ. ಶನಿ ಶಿಂಗನಾಪುರದಲ್ಲಿ ಶನಿದೇವನ ದೇವಾಲಯವಿದೆ. ಈ ಪ್ರಯಾಣ ದೀರ್ಘವಲ್ಲ. ನೀವು ಒಂದು ರಾತ್ರಿ ಹೋಟೆಲ್‌ನಲ್ಲಿ ತಂಗಬಹುದು ಅಷ್ಟೇ. ಆತುರದಲ್ಲಿರುವವರಿಗೆ ಇದು ಒಳ್ಳೆಯ ಪ್ಯಾಕೇಜ್‌ ಅಂತಾನೇ ಹೇಳಬಹುದು. ದೇವಸ್ಥಾನವನ್ನು ನೋಡಿದ ನಂತರ ಮನೆಗೆ ಬೇಗನೆ ಹಿಂತಿರುಗಬಹುದು. ಈ ಪ್ರಯಾಣದಲ್ಲಿ ನೀವು ಎರಡು ದೊಡ್ಡ ದೇವಾಲಯಗಳನ್ನು ನೋಡಲು ಸಾಧ್ಯವಾಗುತ್ತದೆ.

chennai shidi package

ಚೆನ್ನೈ-ಶಿರಡಿ ಪ್ಯಾಕೇಜ್

ಚೆನ್ನೈ-ಶಿರಡಿ ಪ್ಯಾಕೇಜ್ ಒಂದು ದಿನದ ಪ್ರವಾಸವಾಗಿದೆ. ಇದು ಪ್ರತಿ ಬುಧವಾರ ಇರುತ್ತದೆ.. ಈ ಪ್ರವಾಸದಲ್ಲಿ ನೀವು ಮೊದಲು ಚೆನ್ನೈನಿಂದ ಶಿರಡಿಗೆ ತಲುಪುತ್ತೀರಿ. ಶಿರಡಿಯಲ್ಲಿ ಸಾಯಿಬಾಬಾ ಮಂದಿರವಿದೆ. ನೀವು ಒಂದು ದಿನ ಅಲ್ಲಿಯೇ ಉಳಿಯಲು ಅವಕಾಶವಿರುತ್ತದೆ. ಒಂದು ರಾತ್ರಿ ನೀವು ಹೋಟೆಲ್‌ನಲ್ಲಿ ತಂಗುವ ವ್ಯವಸ್ಥೆಯಿರುತ್ತದೆ. ಚೆನ್ನೈನಿಂದ ಶಿರಡಿಗೆ ಹೋಗಲು ಬಯಸುವವರಿಗೆ ಇದು ಒಳ್ಳೆಯ ಪ್ಯಾಕೇಜ್‌ ಅಂತಾನೆ ಹೇಳಬಹುದು.

ಮೂರು ದಿನಗಳ ಪ್ಯಾಕೇಜ್

ಮೂರು ದಿನಗಳ ಕಾಲ ಉಳಿಯುವ ಪ್ಯಾಕೇಜ್ ಕೂಡ ಲಭ್ಯವಿದೆ. ಇದರಲ್ಲಿ ನೀವು ಐದು ವಿಭಿನ್ನ ಸ್ಥಳಗಳಿಗೆ ತೆರಳಬಹುದು. ಶಿರಡಿ, ಶನಿ ಶಿಂಗನಾಪುರ, ಗ್ರಿಷ್ಣೇಶ್ವರ, ಅಜಂತಾ ಮತ್ತು ಎಲ್ಲೋರಾ. ಇಲ್ಲಿ ನೀವು ಪ್ರಸಿದ್ಧ ದೇವಾಲಯಗಳು ಮತ್ತು ಹಳೆಯ ಗುಹೆಗಳನ್ನು ನೋಡಬಹುದು. ರಾತ್ರಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುವ ವ್ಯವಸ್ಥೆ ಇರುತ್ತದೆ. ನೀವು ಎರಡು ರಾತ್ರಿ ಹೋಟೆಲ್‌ನಲ್ಲಿ ಉಳಿಯಬಹುದು. ಈ ಪ್ರಯಾಣವು ವಾರದಲ್ಲಿ ಮೂರು ದಿನ ಇರುತ್ತದೆ - ಮಂಗಳವಾರ, ಗುರುವಾರ ಮತ್ತು ಶುಕ್ರವಾರ. ಧಾರ್ಮಿಕ ಸ್ಥಳಗಳು ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೆ ಈ ಪ್ಯಾಕೇಜ್ ಉತ್ತಮವಾಗಿದೆ.

ದೇವಸ್ಥಾನದ ಸಮಯ

ದೇವಾಲಯವು ಭಕ್ತರಿಗಾಗಿ ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ಕಾಕಡ ಆರತಿಯನ್ನು ಬೆಳಗ್ಗೆ 5:15 ಕ್ಕೆ ಮಾಡಲಾಗುತ್ತದೆ. ಆರತಿಯನ್ನು ದಿನಕ್ಕೆ 3 ರಿಂದ 4 ಬಾರಿ ಮಾಡಲಾಗುತ್ತದೆ. ಬೆಳಗ್ಗೆ ಕಾಕಡ ಆರತಿಯ ನಂತರ, ಮಧ್ಯಾಹ್ನ ಮತ್ತೊಂದು ಆರತಿ, ಸೂರ್ಯಾಸ್ತದ ಸಮಯದಲ್ಲಿ ಧೂಪ್ ಆರತಿ ಮತ್ತು ರಾತ್ರಿ 10.30 ಕ್ಕೆ ಶೇಜ್ ಆರತಿ ಮಾಡಲಾಗುತ್ತದೆ.

More News

Read more about: irctc travel shirdi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+