ಪತೂರು, ನೆಲ್ಲೂರು

ಕೈಯಲ್ಲಿ ನೇಯ್ಗೆ ಮಾಡಿದ ಸೀರೆ ಹಾಗೂ ಇತರೆ ಕರಕುಶಲ ವಸ್ತುಗಳಿಗೆ ಪತೂರು ಜನಪ್ರಿಯ. ಕೋವೂರು, ದಮರಮಡುಗು ನಡುವೆ ಈ ಊರಿದೆ. ತೆಲುಗಿನ ಜನಪ್ರಿಯ ಕವಿ ತಿಕ್ಕಣ್ಣ ಸೋಮಯಾಜಿ ಅವರ ಹುಟ್ಟೂರಾಗಿಯೂ ಇದು ಜನಪ್ರಿಯವಾಗಿದೆ. ಈ ಮೂಲಕ ಐತಿಹಾಸಿಕ ಜನಪ್ರಿಯತೆಯೂ ಇದಕ್ಕೆ ಲಭಿಸಿದೆ. ಕವಿ ಸೋಮಯಾಜಿ ತಮ್ಮ ಜೀವಿತದ ಬಹುಪಾಲು ಅವಧಿಯನ್ನು ಇಲ್ಲೇ ಕಳೆದಿದ್ದು, ಅಂತಿಮವಾಗಿ ಇಲ್ಲಿಯೇ ಪ್ರಾಣ ತ್ಯಜಿಸಿದ್ದರು. ಕೋವೂರಿನಿಂದ ನಾಲ್ಕು ಕಿ.ಮೀ. ದೂರದಲ್ಲಿದೆ ಪತೂರು. ಅಂದರೆ ನೆಲ್ಲೂರು ಪಟ್ಟಣದಿಂದ ಇರುವ ದೂರ 10 ಕಿ.ಮೀ. ರಾಜ್ಯ ರಾಜಧಾನಿ ಹೈದ್ರಾಬಾದ್‌ನಿಂದ 354 ಕಿ.ಮೀ. ದೂರದಲ್ಲಿದೆ. ನೆಲ್ಲೂರಿಗೆ ಅತ್ಯಂತ ಸಮೀಪವಾಗಿದ್ದು, ಆಸಕ್ತರು ಅಲ್ಲಿ ಬಂದಾಗ ಭೇಟಿ ನೀಡುವಂತೆ ಸಲಹೆ ನೀಡಲಾಗುತ್ತದೆ.

Please Wait while comments are loading...