ನರಸಿಂಹಸ್ವಾಮಿ ದೇವಸ್ಥಾನ, ನೆಲ್ಲೂರು

ಮುಖಪುಟ » ಸ್ಥಳಗಳು » ನೆಲ್ಲೂರು » ಆಕರ್ಷಣೆಗಳು » ನರಸಿಂಹಸ್ವಾಮಿ ದೇವಸ್ಥಾನ

ನೆಲ್ಲೂರಿನಿಂದ 13 ಕಿ.ಮೀ. ದೂರದಲ್ಲಿದೆ ನರಸಿಂಹಸ್ವಾಮಿ ದೇವಸ್ಥಾನ. ವಿಷ್ಣು ದೇವರು ನೆಲೆಸಿರುವ ದೇವಸ್ಥಾನವಿದು. ಇಲ್ಲಿರುವ ನರಸಿಂಹ ದೇವರ ವಿಗ್ರಹವು ವಿಷ್ಣುವಿನ ನಾಲ್ಕನೇ ರೂಪ ಅಥವಾ ಅವತಾರವಾಗಿದೆ. ಈ ದೇವಾಲಯವನ್ನು ಶ್ರೀ ವೇದಗಿರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಅಂತಲೂ ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆ ಉಳ್ಳವರಿಗೆ, ಭಕ್ತರಿಗೆ ಇದು ಪ್ರಮುಖ ತಾಣ. ದೇವಾಲಯದ ಸುತ್ತ ಸಾಕಷ್ಟು ದಂತಕತೆಗಳು ಇವೆ.

ದೇವಾಲಯದ ಒಳಗೊಂದು ಸಂತ ವೃಕ್ಷವಿದೆ. ಈ ಮರ ಬಂಜೆತನ ನಿವಾರಿಸುತ್ತದೆ ಎನ್ನುವ ನಂಬಿಕೆ ಇದೆ. ಇದರಿಂದಲೇ ಮಕ್ಕಳಾಗದ ಸಾಕಷ್ಟು ದಂಪತಿ ಇಲ್ಲಿ ಬಂದು ಮರಕ್ಕೆ ಹರಸಿಕೊಳ್ಳುತ್ತಾರೆ. ಪ್ರಾರ್ಥನೆ ಸಲ್ಲಿಸಿ ತಮ್ಮ ಬೇಡಿಕೆ ಮುಂದಿಡುತ್ತಾರೆ. ಕೊಂಡಿ ಕಸುಲಿ ಹುಂಡಿ ಬಳಿ ಬಂದು ತಮ್ಮ ಬೇಡಿಕೆಯನ್ನು ಭಕ್ತರು ಸಲ್ಲಿಸುತ್ತಾರೆ. ಇಲ್ಲಿ ಹರಸಿಕೊಳ್ಳುವ ಭಕ್ತರಲ್ಲಿ ಹಾವು ಹಾಗೂ ಚೇಳಿನ ಕಡಿತದ ವಿಷ ಸಹ ಇಳಿಯುತ್ತದೆ ಎಂಬ ನಂಬಿಕೆ ಇದೆ. ಮುಖ್ಯ ದೇವಾಲಯಕ್ಕೆ ಪಕ್ಕದಲ್ಲೇ ಒಂದು ಪ್ರತ್ಯೇಕ ದೇಗುಲ ಇದೆ. ಇದು ಆದಿಲಕ್ಷ್ಮಿ ದೇವಿಗೆ ಮೀಸಲಾಗಿರುವ ದೇವಾಲಯ. ನೆಲ್ಲೂರಿಗೆ ಬಂದವರು ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಬೇಕೆಂದು ಸಲಹೆ ನೀಡಲಾಗುತ್ತದೆ.

Please Wait while comments are loading...