ಮೈಪಾಡು ಕಡಲತೀರ, ನೆಲ್ಲೂರು

ನೆಲ್ಲೂರು ಪಟ್ಟಣದಿಂದ ಸುಮಾರು 22 ಕಿ.ಮೀ. ದೂರದಲ್ಲಿದೆ ಮೈಪಾಡು ಕಡಲತೀರ. ಮೈಪಾಡುಗೆ ತೆರಳುವ ಮಾರ್ಗವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ಸುಲಭವಾಗಿ ನೆಲ್ಲೂರಿನಿಂದ ಇಲ್ಲಿಗೆ ತೆರಳಬಹುದು. ಕಡಲತೀರದ ಎದುರುಭಾಗ ದೀರ್ಘವಾಗಿದೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ರೆಸಾರ್ಟ್, ಹೋಟೆಲ್‌ಗಳು ಕಂಡು ಬರುವುದಿಲ್ಲ. ಪ್ರಶಾಂತವಾದ ಈ ಕಡಲತೀರದಲ್ಲಿ ಸಂಜೆ 6 ರವರೆಗೆ ಮಾತ್ರ ಸಮಯ ಕಳೆಯಲು ಅವಕಾಶ ಇರುತ್ತದೆ. ಈ ಕಡಲ ತೀರದ ಸೂರ್ಯೋದಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದನ್ನು ತಪ್ಪಿಸಿಕೊಳ್ಳಬಾರದು. ನೆಲ್ಲೂರಿನಿಂದ ಮೈಪಾಡುಗೆ ಸಾಕಷ್ಟು ಬಸ್‌ ಸೌಲಭ್ಯ ಇದೆ. ದಿನದ ಎಲ್ಲಾ ಸಮಯದಲ್ಲೂ ಬಸ್‌ ಸೇವೆ ನಿರಂತರವಾಗಿ ಇರುತ್ತದೆ. ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಸೇರುತ್ತಾರೆ. ನಿಧಾನವಾಗಿ ಬೀಸುವ ಗಾಳಿ ಹಾಗೂ ಅಬ್ಬರವಿಲ್ಲದ ಅಲೆಗಳು ಮುದ ನೀಡುತ್ತವೆ. ಇದು ಸದಾ ಜನರಿಂದ ಕಿಕ್ಕಿರಿದು ತುಂಬಿರುವುದಿಲ್ಲ. ಚಟುವಟಿಕೆಯಿಂದ ಕೂಡಿರುವುದೂ ಕಡಿಮೆ. ಇಲ್ಲಿ ಭೇಟಿ ನೀಡದೇ ತೆರಳಿದರೆ ನೆಲ್ಲೂರಿಗೆ ಬಂದ ಅನುಭವ ಪರಿಪೂರ್ಣ ಆಗುವುದಿಲ್ಲ.

Please Wait while comments are loading...