ನೆಲಪಟ್ಟು ಪಕ್ಷಿ ಧಾಮ, ನೆಲ್ಲೂರು

ಮುಖಪುಟ » ಸ್ಥಳಗಳು » ನೆಲ್ಲೂರು » ಆಕರ್ಷಣೆಗಳು » ನೆಲಪಟ್ಟು ಪಕ್ಷಿ ಧಾಮ

ಪುಲಿಕಟ್‌ ಕೆರೆಯಿಂದ 20 ಕಿ.ಮೀ. ದೂರದಲ್ಲಿದೆ ನೆಲಪಟ್ಟು ಪಕ್ಷಿ ಧಾಮ. ನೆಲ್ಲೂರು ಜಿಲ್ಲೆಯ ಪೂರ್ವ ಕರಾವಳಿ ಭಾಗ ಇದಾಗಿದೆ. ನೆಲ್ಲೂರು ಮಾತ್ರವಲ್ಲ ಚೆನ್ನೈನಿಂದ ಕೂಡ ಇಲ್ಲಿಗೆ ಆರಾಮವಾಗಿ ತಲುಪಬಹುದು. ನೆಲ್ಲೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. ಈ ಧಾಮ ಅನೇಕ ಅಪರೂಪದ ಪಕ್ಷಿ ಸಂಕುಲದ ಸಂತಾನೋತ್ಪತ್ತಿ ತಾಣವಾಗಿ ಜನಪ್ರಿಯವಾಗಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಅವುಗಳಲ್ಲಿ ಪ್ರಮುಖವಾದುದು ಲಿಟಲ್‌ ಕೋರ್‌ಮೋಂಟ್‌, ಪೇಂಟೆಂಡ್‌ ಸ್ಟ್ರೋಕ್‌, ವೈಟ್‌ ಐಬಿಸ್‌ ಹಾಗೂ ಸ್ಪೋಟೆಡ್‌ ಬಿಲ್ಡ್‌ ಪಿಲಿಕನ್‌ ಮುಖ್ಯವಾದವು.

ಅಕ್ಟೋಬರ್‌ ತಿಂಗಳಿಂದ ಮಾರ್ಚ್ ನಡುವಿನ ಅವಧಿ ಈ ಪಕ್ಷಿಧಾಮಕ್ಕೆ ಭೇಟಿ ನೀಡಲು ಸಕಾಲ. ಆ ಸಂದರ್ಭದಲ್ಲಿ ಅನೇಕ ವಿಧದ ಪಕ್ಷಿಗಳನ್ನು ವೀಕ್ಷಿಸಬಹುದು. ಅನೇಕ ಪಕ್ಷಿಗಳು ಈ ಸಂದರ್ಭದಲ್ಲಿಯೇ ಇಲ್ಲಿಗೆ ಆಗಮಿಸುತ್ತವೆ. ಅಪರೂಪದ ಪಕ್ಷಿ ನೋಡಲು ಸೂಕ್ತ ಸಮಯ ಹಾಗು ತಾಣ ಇದಾಗಿದೆ.

Please Wait while comments are loading...