ಬರಾಹ ಶಾಹೀದ್‌ ದರ್ಗಾ, ನೆಲ್ಲೂರು

ಮುಖಪುಟ » ಸ್ಥಳಗಳು » ನೆಲ್ಲೂರು » ಆಕರ್ಷಣೆಗಳು » ಬರಾಹ ಶಾಹೀದ್‌ ದರ್ಗಾ

ಬರಾಹ ಶಾಹೀದ್‌ ದರ್ಗಾ ಒಂದು ಜನಪ್ರಿಯ ರೋಜಾ ಅಥವಾ ಸಮಾದಿಯಾಗಿದೆ. ನೆಲ್ಲೂರು ಜಿಲ್ಲೆಯ ಸೂಲೂರು ಪೇಟೆ ಪ್ರದೇಶದಲ್ಲಿದೆ. 12 ಮಂದಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸಮಾಧಿಯು ಇಲ್ಲಿದೆ. ಇಲ್ಲಿ ಬಂದು ಗೌರವ ಸಲ್ಲಿಸಿ ತಮ್ಮ ಬೇಡಿಕೆ ಮುಂದಿಡುವ ಪ್ರತಿಯೊಬ್ಬ ಭಕ್ತರ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದೆ. ದರ್ಗಾದಲ್ಲಿ ಮೊಹರಂ ಆಚರಣೆ ಪ್ರತಿವರ್ಷ ಅತ್ಯಂತ ವಿಶಿಷ್ಟ ಹಾಗೂ ವಿಜೃಂಭಣೆಯಿಂದ ಮಾಡಲಾಗುತ್ತದೆ. ಮೊಹರಂ ಸಂದರ್ಭದಲ್ಲಿ ಇಲ್ಲಿ ಮೂರು ದಿನದ ಉತ್ಸವ ನಡೆಯುತ್ತದೆ. ರೊಟ್ಟೆಲಾ ಪಂಡುಗಾ ಹೆಸರಿನಲ್ಲಿ ದರ್ಗಾದಲ್ಲಿ ಈ ಉತ್ಸವ ನಡೆಯುತ್ತದೆ.

ಬರಾಹ ಶಾಹೀದ್‌ ದರ್ಗಾವು ಸಮುದ್ರ ತೀರಕ್ಕೆ ಅತ್ಯಂತ ಸಮೀಪದಲ್ಲಿದೆ. ಸಮುದ್ರ ತೀರದಿಂದ ಕೇವಲ ಐದು ಕಿ.ಮೀ. ಮಾತ್ರ ಅಂತರದಲ್ಲಿದೆ. ಅಮಾವಾಸ್ಯೆ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲು ಹಾಗೂ ರಾತ್ರಿಯಿಡೀ ಉಳಿಯುವಂತೆ ಸಲಹೆ ನೀಡಲಾಗುತ್ತದೆ.

Please Wait while comments are loading...