ಅಡ್ಡಲ ಮಂಡಪಂ, ನೆಲ್ಲೂರು

ನೆಲ್ಲೂರಿನ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿಯೇ ಅಡ್ಡಲ ಮಂಡಪಂ ಇದೆ. ಇದು ತನ್ನ ಒಳಾಂಗಣ ಕಲಾತ್ಮಕ ಕೆತ್ತನೆ, ವಿನ್ಯಾಸದಿಂದ ಜನಪ್ರಿಯವಾಗಿದೆ. ದೇವಾಲಯದ ಒಳಭಾಗದ ಕಲ್ಲಿನ ಕೆತ್ತನೆ ಅದ್ಭುತ ಅನ್ನುವಂತಿದೆ. ಇಲ್ಲಿಯೂ ಒಂದು ಕನ್ನಡಿ ಮಂಟಪ ಅಥವಾ ಮಿರರ್‌ ಹಾಲ್‌ ಇದೆ. ತರಹೇವಾರಿ ಕನ್ನಡಿಗಳನ್ನು ಇಲ್ಲಿ ಜೋಡಿಸಲಾಗಿದೆ. ಹಲವು ಶತಮಾನಗಳ ಹಿಂದೆಯೆ ಅಳವಡಿಸಲಾಗಿರುವ ಈ ಕನ್ನಡಿಗಳ ಪ್ರತಿಫಲನ ಶಕ್ತಿಯು ಇಂದಿಗೂ ಹಾಗೆ ಇರುವುದು ವಿಶೇಷ. ಇದು ಇನ್ನೂ ಒಂದು ಕಾರಣಕ್ಕೆ ಜನಪ್ರಿಯವಾಗಿದೆ. ಅದೇನೆಂದರೆ ಈ ದೇವಾಲಯ ರಂಗನಾಥಸ್ವಾಮಿಯ ಆಸನವಾಗಿದೆ. ಇಲ್ಲಿ ಆತ ನೆಲೆಸಿದ್ದಾನೆಂದು  ನಂಬಲಾಗುತ್ತದೆ. ಅಡ್ಡಲ ಮಂಡಪಂಗೆ ಅಳವಡಿಸಿರುವ ಕನ್ನಡಿಗಳು ಇಂದು ಅಪಾರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಅಲ್ಲದೇ ಭಕ್ತರ ಆಗಮನವಂತೂ ಇದ್ದೇ ಇರುತ್ತದೆ.

Please Wait while comments are loading...