ಇದು ನಲ್ಗೊಂಡ ಜಿಲ್ಲೆಯಲ್ಲಿ ಬರುವ ಗ್ರಾಮವಾಗಿದ್ದು ನಲ್ಗೊಂಡ ನಗರಕ್ಕೆ ಬಹಳ ಸಮೀಪದಲ್ಲಿದೆ. ಇನ್ನೊಂದು ವಿಶೇಷತೆ ಎಂದರೆ ಇದು ಕಾಲುವೆಯ ಮೂಲಕ ವಿಜಯವಾಡಾಕ್ಕೆ ಸಂಪರ್ಕವನ್ನು ಹೊಂದಿದೆ.
ಇದು ಇತಿಹಾಸ ಆಸಕ್ತರ ಮೊದಲ ಆಯ್ಕೆಯಾಗಿದೆ, ಕಾರಣ ಇಂದಿಗೂ ಕಾಕತೀಯ ಅರಸರ ವಾಸ್ತುಶಿಲ್ಪದ ಹಲವು ಕಾಣಿಕೆಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಕೆಲವು ದೇವಾಲಯಗಳನ್ನು ನೋಡಿದರೆ ಈ ಮಾತು ಎಷ್ಟು ನಿಜ ಎಂದು ತಿಳಿಯುತ್ತದೆ. ಇಲ್ಲಿನ ಪ್ರಮುಖ ದೇವಾಲಯವೆಂದರೆ ಸ್ವಯಂಭು ಶಂಭುಲಿಂಗೇಶ್ವರ ಸ್ವಾಮೀ ದೇವಾಲಯ. ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ದೇವಾಲಯದ ತುದಿಯಲ್ಲಿರುವ ಶಿವಲಿಂಗ. ಈ ಲಿಂಗದಲ್ಲಿ 2 ಇಂಚಿನ ರಂಧ್ರವಿದ್ದು ಇದು ವರ್ಷದ ಎಲ್ಲಾ ದಿನಗಳಲ್ಲೂ ನೀರಿನಿಂದ ತುಂಬಿರುತ್ತದೆ. ಇದೇ ಕಾರಣದಿಂದ ಮೆಲ್ಲಚವ್ರು ಗ್ರಾಮವನ್ನು ‘ದಕ್ಷಿಣದ ವಾರಣಾಸಿ’ ಎಂದು ಕರೆಯುತ್ತಾರೆ.
ಈ ದೇವಾಲಯದ ಎತ್ತರ ಸತತವಾಗಿ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದೆ ಎಂಬ ಪ್ರತೀತಿಯೂ ಇದೆ.


Click it and Unblock the Notifications