Search
 • Follow NativePlanet
Share
ಮುಖಪುಟ » ಸ್ಥಳಗಳು» ನಾಗಾರ್ಜುನಸಾಗರ

ನಾಗರ್ಜುನಸಾಗರ : ಬೌದ್ಧ ನಗರಿ

10

ದಕ್ಷಿಣ ಭಾರತದ ಆಂಧ್ರ ಪ್ರದೇಶದಲ್ಲಿರುವ  ನಾಗರ್ಜುನಸಾಗರವೆಂಬ  ಸಣ್ಣ ಪಟ್ಟಣವು ಪ್ರಪಂಚದಾದ್ಯಂತ  ಬೌದ್ಧರ ಪವಿತ್ರ ಕ್ಷೇತ್ರವಾಗಿದೆ. ಯಾತ್ರಾಸ್ಥಳದ ಹೊರತಾಗಿಯೂ ಇದು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು ಮನಸೆಳೆಯುತ್ತದೆ.

ಪುರಾತನ ದಿನಗಳಲ್ಲಿ ಈ ಪಟ್ಟಣವನ್ನು ವಿಜಯಪುರಿ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಈ ಪಟ್ಟಣಕ್ಕೆ ಭಗವಾನ ಬುದ್ಧನ ಭಕ್ತನಾದ ನಾಗಾರ್ಜುನನ ಹೆಸರನ್ನು ಇರಿಸಲಾಯಿತು. ಈತನು ಬುದ್ಧದೇವನ ಉತ್ಕಟ ಭಕ್ತನಷ್ಟೇ ಅಲ್ಲದೇ ಪಟ್ಟಣದ ಜನರಿಂದ ಸನ್ಮಾನಿತನೂ ಆಗಿದ್ದನು. ಅಲ್ಲದೇ  ಕ್ರಿಸ್ತಶಕ 1 ನೇ ಶತಮಾನದ ಅಂತ್ಯದ ವೇಳೆಯಲ್ಲಿ ಸುಮಾರು 60 ವರ್ಷಗಳ ಕಾಲ ಭಾರತದಲ್ಲಿ ಬೌದ್ಧ ಸಂಘದ ನಾಯಕನೂ ಆಗಿದ್ದನು. ಈ ಎಲ್ಲ ಘಟನಾವಳಿಗಳನ್ನು ಅವಲೋಕಿಸಿದಾಗ ಹಿಂದಿನ ಸಹಸ್ರಮಾನದ ಆರಂಭದಲ್ಲಿ ದಕ್ಷಿಣ ಭಾರತವು ಒಂದು ಪ್ರಮುಖ ಬೌದ್ಧ ಕೇಂದ್ರವಾಗಿತ್ತು ಎಂದು ಸ್ಪಷ್ಟವಾಗುತ್ತದೆ.

ಈ ಸ್ಥಳದಲ್ಲಿನ  ಉತ್ಖನನದ  ಸಂದರ್ಭದಲ್ಲಿ, ಹಿಂದೊಮ್ಮೆ ಈ  ಪ್ರದೇಶದಲ್ಲಿ  ಬೌದ್ಧ ಧರ್ಮವು ಅಭಿವೃದ್ಧಿ ಹೊಂದಿದ್ದರ ಬಗೆಗಿನ ಅನೇಕ ಪುರಾವೆಗಳು ಕಂಡುಬಂದಿವೆ. ಈ ವಸ್ತುಗಳು ಮುಖ್ಯವಾಗಿ  ಶಿಲ್ಪಗಳು ಮತ್ತು ಸ್ತೂಪಗಳ ರೂಪದಲ್ಲಿದ್ದು  ಭಗವಾನ ಬುದ್ಧನ ಜೀವನ ಮತ್ತು ಅವನ ಬೋಧನೆಗಳನ್ನು ಇಲ್ಲಿ  ಚಿತ್ರಿಸಲಾಗಿದೆ. ಈ ಎಲ್ಲ ಸಾಕ್ಷ್ಯಾಧಾರಗಳಿಂದಾಗಿ ನಾಗರ್ಜುನಸಾಗರವು ಪುರಾತತ್ವ ದೃಷ್ಟಿಕೋನದಿಂದ ಒಂದು ಗಮನಾರ್ಹ ಪ್ರದೇಶವಾಗಿ ಮಾರ್ಪಟ್ಟಿದೆ.

ನಾಗರ್ಜುನಸಾಗರವು ಪ್ರಸಿದ್ಧ ನಾಗರ್ಜುನಸಾಗರ ಅಣೆಕಟ್ಟು, ಎಥಿಪೋಥಲ್ ಜಲಪಾತ ಮತ್ತು ನಾಗಾರ್ಜುನಕೊಂಡ ಸೇರಿದಂತೆ ಕೆಲವು ಕುತೂಹಲಕಾರಿ ಸ್ಥಳಗಳನ್ನು ಹೊಂದಿದೆ. ಪಟ್ಟಣವು ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದನಿಂದ ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿದ್ದು  ಹೈದರಾಬಾದ್ ನಿಂದ ಸುಲಭವಾಗಿ ರಸ್ತೆಯ ಮೂಲಕ ತಲುಪಬಹುದು. ರಾಜ್ಯದ ಪ್ರಮುಖ ಪಟ್ಟಣಗಳು ಹಾಗೂ ನಗರಗಳಿಂದ ನಾಗರ್ಜುನಸಾಗರಕ್ಕೆ ಅನೇಕ  ಬಸ್ಸುಗಳು ಸಂಚರಿಸುತ್ತವೆ. ಇಲ್ಲಿ ಯಾವುದೇ ರೈಲು ನಿಲ್ದಾಣ ಅಥವಾ ವಿಮಾನ ನಿಲ್ದಾಣಗಳಿಲ್ಲದ ಕಾರಣ ರಸ್ತೆ ಮಾರ್ಗವಾಗಿ ಪಟ್ಟಣ ತಲುಪುವುದು ಉತ್ತಮ.

ಚಳಿಗಾಲವೇ ನಾಗರ್ಜುನಸಾಗರಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಏಕೆಂದರೆ ಉಷ್ಣವಲಯದ ಹವಾಮಾನ ಸ್ಥಿತಿಯಿಂದಾಗಿ ಪಟ್ಟಣವು ಬೇಸಿಗೆಯಲ್ಲಿ ಅತ್ಯಂತ ಬಿಸಿಯನ್ನೂ ಅನುಭವಿಸುತ್ತಿದ್ದು ಚಳಿಗಾಲದಲ್ಲಿ ಕಡಿಮೆ ಪ್ರಮಾಣದ ಚಳಿಯನ್ನು ಅನುಭವಿಸುತ್ತದೆ.

ನಾಗಾರ್ಜುನಸಾಗರ ಪ್ರಸಿದ್ಧವಾಗಿದೆ

ನಾಗಾರ್ಜುನಸಾಗರ ಹವಾಮಾನ

ಉತ್ತಮ ಸಮಯ ನಾಗಾರ್ಜುನಸಾಗರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನಾಗಾರ್ಜುನಸಾಗರ

 • ರಸ್ತೆಯ ಮೂಲಕ
  ನಾಗರ್ಜುನಸಾಗರವು ರಸ್ತೆ ಮಾರ್ಗವಾಗಿ ಸುತ್ತಣ ಪಟ್ಟಣಗಳು ಮತ್ತು ಹಳ್ಳಿಗಳೊಡನೆ ಒಳ್ಳೆಯ ಸಂಪರ್ಕ ಹೊಂದಿದೆ. ನಗರದ ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದು ಚೆನೈ, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ನಂತಹ ಪಟ್ಟಣಗಳಿಗೆ ನಿಯಮಿತವಾಗಿ ಬಸ್ಸುಗಳು ಸಂಚರಿಸುತ್ತವೆ. ಪ್ರಮುಖ ನಗರಗಳಿಂದ ಡಿಲಕ್ಸ್ ಮತ್ತು ವೋಲ್ವೋ ಬಸ್ಸುಗಳು ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  135 ಕಿಮೀ ದೂರದಲ್ಲಿರುವ ಗುಂಟೂರು ನಾಗರ್ಜುನಸಾಗರದ ಹತ್ತಿರದ ರೈಲ್ವೇ ನಿಲ್ದಾಣವಾಗಿದೆ. ಗುಂಟೂರಿನಲ್ಲಿರುವ ರೈಲ್ವೇ ನಿಲ್ದಾಣವು ದಕ್ಷಿಣ ಭಾರತದ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಚೆನೈಯಿಂದ ಹೈದರಾಬಾದ್ ಗೆ ಬರುವ ಅನೇಕ ರೈಲುಗಳು ಗುಂಟೂರು ನಗರದ ಮಾರ್ಗವಾಗಿ ಹೋಗುತ್ತವೆ. ರೈಲಿನಲ್ಲಿ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದಿಂದ ನಾಗರ್ಜುನಸಾಗರಕ್ಕೆ ಟ್ಯಾಕ್ಸಿಗಳು ಮತ್ತು ಬಸ್ಸುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನಾಗರ್ಜುನಸಾಗರವು ಯಾವುದೇ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಹತ್ತಿರದ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ನಲ್ಲಿರುವ ರಾಜೀವ್ ಗಾಂಧಿ ಅಂತರ ರಾಷ್ಟ್ರೀಯ ವಿಮಾನನಿಲ್ದಾಣ. ಇದು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ವಿಶ್ವದ ಇತರೆ ದೇಶಗಳು ಹಾಗೂ ದೇಶದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ವಾಯುಯಾನದಿಂದ ಬರುವ ಪ್ರವಾಸಿಗರು ಹೈದರಾಬಾದ್ ನಿಂದ ಮುಂದೆ ಟ್ಯಾಕ್ಸಿಗಳ ಮೂಲಕ 135 ಕಿಮೀ ಪಯಣಿಸಿ ನಾಗರ್ಜುನಸಾಗರವನ್ನು ತಲುಪಬಹುದು. ವಿಮಾನನಿಲ್ದಾಣದ ಹೊರಗೆ ಟ್ಯಾಕ್ಸಿಗಳು ಲಭ್ಯವಿರುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Jan,Sat
Return On
23 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Jan,Sat
Check Out
23 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Jan,Sat
Return On
23 Jan,Sun