Search
 • Follow NativePlanet
Share
ಮುಖಪುಟ » ಸ್ಥಳಗಳು» ಶ್ರೀಶೈಲಂ

ಶ್ರೀಶೈಲಂ : ಪವಿತ್ರ ನಗರ

18

ಭಾರತದಲ್ಲಿ ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ. ಅದರಲ್ಲೂ ಐತಿಹಾಸಿಕ ಪ್ರಿಯರಿಗೆ ಇಷ್ಟವಾಗುವಂತಹ ಕುತೂಹಲಕಾರಿ ವಿಷಯಗಳಿಗೆ ಕೊನೆ ಎಂಬುದಿಲ್ಲ. ಇಂತಹ ಸಮೃದ್ಧ ಧಾರ್ಮಿಕ ಹಾಗೂ ಐತಿಹಾಸಿಕ ಸಂಪತ್ತುನ್ನು ಹೊಂದಿರುವ ದೇಶ ಭಾರತ !

ಭಾರತೀಯರಿಗೆ ಅವರವರ ಧರ್ಮಗಳಲ್ಲಿ ಎಲ್ಲಿಲ್ಲದ ನಂಬಿಕೆ ಹಾಗೂ ಪ್ರೀತಿ. ಶ್ರೀ ರಾಮನಿಂದ ಹಿಡಿದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವ್ಯಕ್ತಿಗಳವರೆಗಿನ ಎಲ್ಲಾ ವಿಷಯಗಳ ಬಗ್ಗೆಯೂ ನಮ್ಮಲ್ಲಿ ದಾಖಲೆಗಳಿವೆ. ಪುರಾವೆಗಳಿವೆ. ಇಂತಹ ಪುರಾಣಕಾಲದಲ್ಲಿ ’ಹೀಗಿತ್ತು’ ಎಂಬುದಕ್ಕೆ ಸಾಕ್ಷಾಧಾರಗಳನ್ನು ಒದಗಿಸುವ ಏಕೈಕ ತಾಣ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಶ್ರೀ ಶೈಲಂ ಪಟ್ಟಣ.

ಶ್ರೀಶೈಲಂ / ಶ್ರೀ ಶೈಲ ಹಿಂದುಗಳಿಗೆ ಧಾರ್ಮಿಕ ಸಂಪ್ರದಾಯಕ್ಕೆ ಪ್ರಾಮುಖ್ಯತೆಯನ್ನು ಪಡೆದಿರುವ ಪುಟ್ಟ ಪಟ್ಟಣ. ಈ ಪಟ್ಟಣವನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟದ ಮೇಲೆ ಕಾಣಬಹುದು. ಈ ನಗರವು ಕೃಷ್ಣಾ ನದಿಯ ತಟದಲ್ಲಿ ಸ್ಥಾಪಿತವಾಗಿದೆ. ಶ್ರೀ ಶೈಲಂ ಪಟ್ಟಣವು ಆಂಧ್ರ ಪ್ರದೇಶದ ರಾಜಧಾನಿ ಹೈದ್ರಾಬಾದ್ ನಗರದ ದಕ್ಷಿಣ ದಿಕ್ಕಿನಲ್ಲಿದೆ ಹಾಗೂ ಇಲ್ಲಿಂದ ಶ್ರೀ ಶೈಲಂ ಪಟ್ಟಣಕ್ಕೆ 212  ಕೀ.ಮಿ ದೂರ.

ಶ್ರೀ ಶೈಲಂ ಪಟ್ಟಣವು ಹಿಂದೂಗಳ ಪವಿತ್ರ ನಗರ ಎಂದು ಗುರುತಿಸಲ್ಪಟ್ಟಿದ್ದು, ಪ್ರತಿ ವರ್ಷ ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಯಾತ್ರಿಗಳು  ಬರುತ್ತಾರೆ. ನಗರವು ಪ್ರಸಿದ್ಧ ದೇವಾಲಯಗಳನ್ನು ಹಾಗೂ ’ತೀರ್ಥಂ’ (ತೀರ್ಥ ಸ್ಥಳ) ಗಳನ್ನು ಹೊಂದಿರುವುದರಿಂದ ಯಾತ್ರಾರ್ಥಿಗಳಿಗೆ ಯಾತ್ರಾ ಗಮ್ಯಸ್ಥಳವಾಗಿದೆ. ಹಾಗೂ ಪ್ರವಾಸಿಗರಿಗೆ ನೆಚ್ಚಿನ ಪ್ರವಾಸಿ ತಾಣವಾಗಿದೆ.

ಇಲ್ಲಿನ ಅತ್ಯಂತ ಪ್ರಮುಖವಾದ ದೇವಾಲಯಗಳೆಂದರೆ ಶಿವ ಹಾಗೂ ಆತನ ಪತ್ನಿ ದೇವಿ ಪಾರ್ವತಿಗೆ ಮೀಸಲಾದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ. ಇಲ್ಲಿ ಭಗವಾನ್ ಶಿವನನ್ನು ಮಲ್ಲಿಕಾರ್ಜುನ ಸ್ವಾಮಿ ಎಂತಲೂ ಹಾಗೂ ಪಾರ್ವತಿ ದೇವಿಯನ್ನು ಭ್ರಮರಾಂಭ ಎಂದೂ ಪೂಜಿಸಲಾಗುತ್ತದೆ. ಈ ದೇವಾಲಯವು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ ಎಂದು ಕರೆಸಿಕೊಳ್ಳುವುದಕ್ಕೆ ಕಾರಣ, ಈ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳ  ನಡುವೆ ಇರುವುದು. ಮಲ್ಲೆಲಾ ತೀರ್ಥಂ ಧಾರ್ಮಿಕ ದೃಷ್ಟಿಯಿಂದ ಇನ್ನಷ್ಟು ಪ್ರಸಿದ್ಧಿಯನ್ನು ಗಳಿಸಿರುವ ಸ್ಥಳ. ಇದೊಂದು ಜಲಪಾತವಾಗಿದ್ದು, ಈ ತೀರ್ಥದ ನೀರಿನಲ್ಲಿ ಸ್ನಾನ ಮಾಡಿದರೆ ಸ್ನಾನ ಮಾಡಿದ ವ್ಯಕ್ತಿಯ ಪಾಪ ತೊಳೆದು ಹೋಗುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಇಲ್ಲಿಗೆ ಭಕ್ತಾದಿಗಳು ನಿರಂತರವಾಗಿ ಬರುತ್ತಾರೆ.

ಶ್ರೀ ಶೈಲವು ಪ್ರಸಿದ್ಧ ಸ್ಥಳ ಆಗಿದ್ದರೂ ಇಲ್ಲಿ ವಿಮಾನ ಹಾಗೂ ರೈಲ್ವೆ ನಿಲ್ದಾಣ ವ್ಯವಸ್ಥೆಗಳಿಲ್ಲ. ಶ್ರೀ ಶೈಲಂ ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಚಳಿಗಾಲ. ಉತ್ತರ ಭಾರತದ ಚಳಿಗೆ ಹೋಲಿಸಿದರೆ ಇಲ್ಲಿನ ವಾಯುಗುಣ ಸೌಮ್ಯವಾಗಿರುತ್ತದೆ. ಇಲ್ಲಿ ಉಷ್ಣವಲಯದ ವಾಯುಗುಣವನ್ನು ಕಾಣಬಹುದಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ಈ ಸ್ಥಳಕ್ಕೆ ಪ್ರಯಾಣ ಅಷ್ಟೊಂದು  ಯೋಗ್ಯವಾಗಿಲ್ಲವೆಂದು ಹೇಳಬಹುದು.

ಶ್ರೀಶೈಲಂ ಪ್ರಸಿದ್ಧವಾಗಿದೆ

ಶ್ರೀಶೈಲಂ ಹವಾಮಾನ

ಶ್ರೀಶೈಲಂ
34oC / 93oF
 • Partly cloudy
 • Wind: WNW 5 km/h

ಉತ್ತಮ ಸಮಯ ಶ್ರೀಶೈಲಂ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಶ್ರೀಶೈಲಂ

 • ರಸ್ತೆಯ ಮೂಲಕ
  ಶ್ರೀ ಶೈಲಂ ದೇಶದ ಪ್ರಮುಖ ಪಟ್ಟಣಗಳೊಂದಿಗೆ ರಸ್ತೆ ಮಾರ್ಗದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಆಂಧ್ರ ಪ್ರದೇಶದ ಸಾರಿಗೆ ಶ್ರೀ ಶೈಲಂ ಗೆ ಉತ್ತಮವಾದ ಬಸ್ ಸೌಲಭ್ಯವನ್ನು ನೀಡುತ್ತಿದೆ. ಅಲ್ಲದೇ ಇಲ್ಲಿಗೆ ಬರಲು ಮುಂಗಡ ಬಸ್ ಟಿಕೇಟ್ ಪಡೆಯುವುದು ಉತ್ತಮ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಶ್ರೀಶೈಲಂ ನಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಹತ್ತಿರದ ರೈಲ್ವೇ ನಿಲ್ದಾಣವು ಗುಂಟೂರು-ಹುಬ್ಬಳ್ಳಿ ಸಾಲಿನಲ್ಲಿ ಬರುವ ಮಾರ್ಕಪುರ ಎಂಬಲ್ಲಿ ಸ್ಥಾಪಿತವಾಗಿದೆ. ಈ ಮಾರ್ಕಪುರ ರೈಲ್ವೆ ನಿಲ್ದಾಣವು ಶ್ರೀಶೈಲಂ ನಿಂದ 85 ಕಿ. ಮೀ ದೂರದಲ್ಲಿದೆ. ನೀವು ಶ್ರೀಶೈಲಂ ತಲುಪಲು ರೈಲ್ವೆ ನಿಲ್ದಾಣದಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಹೋಗಬಹುದು. ಬಸ್ ಸಾರಿಗೆ ಕಡಿಮೆ ವೆಚ್ಚದಾಯಕವಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶ್ರೀ ಶೈಲಂ ನಲ್ಲಿ ವಿಮಾನ ನಿಲ್ದಾಣದ ವ್ಯವಸ್ಥೆಯಿಲ್ಲ. ಶ್ರೀ ಶೈಲಂ ನಿಂದ 232 ಕೀ.ಮಿ ದೂರದಲ್ಲಿರುವ ಹೈದ್ರಾಬಾದ್ ವಿಮಾನ ನಿಲ್ದಾಣವು ಶ್ರೀ ಶೈಲಂ ಗೆ ಹತ್ತಿರದಲ್ಲಿರುವ ವಿಮಾನ ಮಾರ್ಗ. ಹೈದ್ರಾಬಾದ್ ವಿಮಾನ ನಿಲ್ದಾಣಾವು ದೇಶದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಜೊತೆಹೆ ಜಗತ್ತಿನ ಕೆಲವು ಪ್ರಮುಖ ನಗರಗಳಿಗೂ ಇಲ್ಲಿಂದ ಉತ್ತಮ ವಿಮಾನ ವ್ಯವಸ್ಥೆಯಿದೆ. ಈ ವಿಮಾನ ನಿಲ್ದಾಣದಿಂದ ಖಾಸಗಿ ಟ್ಯಾಕ್ಸಿ ಅಥವಾ ಇನ್ನಿತರ ವಾಹನದ ಮೂಲಕ ಶೀ ಶೈಲಂ ಅನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ

ಶ್ರೀಶೈಲಂ ಲೇಖನಗಳು

One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Srisailam
  34 OC
  93 OF
  UV Index: 9
  Partly cloudy
 • Tomorrow
  Srisailam
  31 OC
  89 OF
  UV Index: 9
  Partly cloudy
 • Day After
  Srisailam
  31 OC
  88 OF
  UV Index: 9
  Partly cloudy